ಪೋಲೀಸ್ ಠಾಣೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ 8ವರ್ಷದ ಪುಟ್ಟ ಬಾಲಕಿ
ಸಿರಿಯಾ : ಗಲಭೆ ಸಂತ್ರಸ್ತ ಆಗ್ನೇಯ ದಮಸ್ಕಸ್ ನೆರೆಹೊರೆಯ ಅಲ್-ಮಿದಾನ್ ಎಂಬಲ್ಲಿ ಪೋಲೀಸ್ ಠಾಣೆಯನ್ನು ಗುರಿಯಾಗಿಸಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೂವರು ಪೋಲೀಸರು ಗಾಯಗೊಂಡಿದ್ದಾರೆ.
ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರು ಏಳು ವರ್ಷದ ಪುಟ್ಟ ಬಾಲಕಿಯನ್ನು ಬಳಸಿಕೊಂಡಿದ್ದು ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಏಳು ವರ್ಷದ ಬಾಲಕಿ ಸಹಾಯ ಕೋರುವ ನೆಪದಲ್ಲಿ ಪೋಲೀಸ್ ಠಾಣೆಗೆ ಆಗಮಿಸಿದ್ದು, ಬಾಲಕಿ ಠಾಣೆ ಒಳ ಪ್ರವೇಶಿಸುತ್ತಿದ್ದಂತೆಯೇ ಉಗ್ರರು ಬಾಲಕಿ ಸೊಂಟಕ್ಕೆ ಕಟ್ಟಿದ್ದ ಸ್ಫೋಟಕ ಸಾಧನವನ್ನು ರಿಮೋಟ್ ಬಳಸಿ ಆನ್ ಮಾಡಿದ್ದಾರೆ. ಸ್ಫೋಟದ ತೀವ್ರತೆಗೆ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಜೊತೆಗೆ ಠಾಣೆಯಲ್ಲಿದ್ದ ಮೂವರು ಪೋಲೀಸರು ಗಾಯಗೊಂಡಿದ್ದಾರೆ.
ಇದುವರೆಗೆ ಯಾವುದೆ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತಿಲ್ಲ . ಉಗ್ರರು ಸಣ್ಣ ಸಣ್ಣ ಮಕ್ಕಳನ್ನು ತಮ್ಮ ಜಿಹಾದಿ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಎಲ್ಲೆಡೆ ಠೀಕೆಗೆ ಗುರಿಯಾಗಿದೆ.
No comments