Breaking News

ಈಶ್ವರಪ್ಪ ಕುಟುಂಬಕ್ಕೆ ಬಿಗ್ ರಿಲೀಫ್





| ಅಕ್ರಮ ಆಸ್ತಿ ಪ್ರಕರಣ | ಸಾಕ್ಷಿ ಕೊರತೆಯಿಂದ ಪ್ರಕರಣ ವಜಾ| ಎಲ್ಲ ದೂರುಗಳಿಂದ ಮುಕ್ತರಾದ ಈಶ್ವರಪ್ಪ

ಶಿವಮೊಗ್ಗ, ಡಿ.29: ಆದಾಯ ಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಕುಟುಂಬಸ್ಥರ ವಿರುದ್ಧ ದಾಖ ಲಾಗಿದ್ದ ಪ್ರಕರಣ, ಸಾಕ್ಷ್ಯಾಧಾರಗಳ ಕೊರತೆಯಿಂದ ಇಂದು ವಜಾಗೊಂಡಿದೆ.

ಈ ಕುರಿತಂತೆ ಪ್ರಕ ರಣವನ್ನು ವಜಾ ಮಾಡಿರುವ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ (ಲೋಕಾಯುಕ್ತ), ದೂರುದಾರರು ತಾವು ಮಾಡಿರುವ ಆರೋಪ ಸಾಬೀತು ಮಾಡುವ ಸಾಕ್ಷ್ಯಾ ಧಾರಗಳನ್ನು ಸರಿಯಾದ ರೀತಿ ಯಲ್ಲಿ ಒದಗಿಸಿಲ್ಲ ಎಂದು ಪ್ರಕರಣ ವನ್ನು ವಜಾ ಮಾಡಿದೆ.

ಈ ಪ್ರಕರಣ ವಜಾಗೊಳ್ಳುವ ಮೂಲಕ ಈಶ್ವರಪ್ಪ ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲಾ ದೂರುಗಳಿಂದ ಮುಕ್ತರಾಗಿದ್ದಾರೆ. ಇನ್ನು ಯಾವುದೇ ದೂರುಗಳು ಅವರ ವಿರುದ್ಧ ಬಾಕಿ ಉಳಿದಿಲ್ಲ.

ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕೆ.ಇ. ಕಾಂತೇಶ್ ಹಾಗೂ ಸೊಸೆ ಶಾಲಿನಿ ಅವರುಗಳು ಆದಾಯ ಕ್ಕಿಂತಲೂ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ ಎಂದು ವಿನೋದ್ ಎನ್ನುವವರು ದೂರು ನೀಡಿದ್ದರು. ಈ ಪ್ರಕರಣ ಲೋಕಾಯುಕ್ತಕ್ಕೆ ಶಿಫಾರಸ್ಸುಗೊಂಡಿತ್ತು. ಈ ಹಿನ್ನೆಲೆ ಯಲ್ಲಿ  ಈಶ್ವರಪ್ಪ ಮನೆಯ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸ ಲಾಯಿತು. ಆದರೆ, ಆ ವೇಳೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೇ ಇದ್ದ ಹಿನ್ನೆಲೆಯಲ್ಲಿ, ದೂರಿನ ವಿರುದ್ಧ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅಂದು ಈಶ್ವರಪ್ಪ ಅಧಿಕಾರ ದಲ್ಲಿದ್ದ ಹಿನ್ನೆಲೆಯಲ್ಲಿ ಈ ದೂರಿಗೆ ಅನುಮತಿಯಿಲ್ಲ ಎಂಬ ಕಾರಣ ದಿಂದ ದೂರನ್ನು ವಜಾ ಮಾಡ ಲಾಗಿತ್ತು.

ಆದರೆ, ದೂರುದಾರರು ಮತ್ತೊಮ್ಮೆ ದೂರು ನೀಡಲು ನಿರ್ಧರಿಸಿದ್ದರು.  ಆ ವೇಳೆ ಈಶ್ವರಪ್ಪ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದ ಕಾರಣ ದೂರನ್ನು ಸ್ವೀಕರಿಸಲಾಗಿತ್ತು.

ಆದರೆ, ದೂರು ನೀಡಿದ ನಂತರ ದೂರಿನ ವಿವರ ಹಾಗೂ ಯಾವ ರೀತಿಯಲ್ಲಿ ಅಪರಾಧ ಮಾಡಿದ್ದಾರೆ ಎಂಬ ಕುರಿತು ಹೇಳಿಕೆ ನೀಡದೇ ದೂರು ನೀಡಿ, ಸಮನ್ಸ್ ಜಾರಿ ಮಾಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸೋರ್ನ್ ಸ್ಟೇಟ್‌ಮೆಂಟ್ ನೀಡದೇ ದೂರು ನೀಡಿದ ಹಿನ್ನೆಲೆಯಲ್ಲಿ ಈಶ್ವರಪ್ಪ ಕುಟುಂಬ ಮತ್ತೆ ಹೈಕೋರ್ಟ್ ಮಟ್ಟಿಲೇರಿತು. ಹೇಳಿಕೆಯಿಲ್ಲದ ಹಿನ್ನೆಲೆಯಲ್ಲಿ ದೂರಿಗೆ ತಡೆ ನೀಡಿದ್ದ ನ್ಯಾಯಾಲಯ, ಪ್ರಕರಣ ಮುಂದು ವರಿಸಲು ಸಾಧ್ಯವಿಲ್ಲ ಎಂದಿತ್ತು. ಆದರೆ, ಈ ಹೇಳಿಕೆಯನ್ನು ನ್ಯಾಯಾಲಯವೇ ಪಡೆಯಬೇಕಿತ್ತು ಎಂದು ಪ್ರಕರಣವನ್ನು ಹೊಸದಾಗಿ ದಾಖಲಿಸಲು ಅವಕಾಶ ನೀಡಲಾಗಿತ್ತು.

ಆನಂತರ ದೂರಿನ ಹೇಳಿಕೆ ದಾಖಲಿಸಿ, ನ್ಯಾಯಾಲಯದ ಮುಂದೆ ವಾದ ಮಂಡಿಸಲಾಗಿತ್ತು. ಆದರೆ, ಈ ದೂರಿನ ಕುರಿತಾಗಿ ಲೋಕಾಯುಕ್ತದ ಅಡಿಯಲ್ಲಿ ಬರುವ ಯಾವುದೇ ಆರೋಪಗಳನ್ನು ಸಾಬೀತು ಮಾಡುವಲ್ಲಿ ದೂರುದಾರರು ವಿಫಲರಾಗಿದ್ದಾರೆ. ಆರೋಪ ಸಾಬೀತು ಮಾಡುವ ಸಾಕ್ಷಿಗಳನ್ನು ಒದಗಿಸುವಲ್ಲಿ ದೂರುದಾರರು ಯಶಸ್ವಿಯಾಗಿಲ್ಲ. ಅಲ್ಲದೇ ಆರೋಪವನ್ನು ಪುಷ್ಠೀಕರಿಸುವ  ಕಾನೂನಿನ ಅಡಿಯಲ್ಲಿ ಸಾಧ್ಯವಾಗಿಲ್ಲ. ಆದಾಯ ಮಿತಿ ಹಾಗೂ ಈಶ್ವರಪ್ಪ ಕುಟುಂಬ ಹೊಂದಿರುವ ಆಸ್ತಿಯ ಕುರಿತಾಗಿ ಯಾವುದೇ ರೀತಿಯ ಸಾಕ್ಷಿಗಳನ್ನು ಒದಗಿಸದೇ ದೂರು ಹಾಗೂ ಹೇಳಿಕೆ ನೀಡಿದ್ದಾರೆ ಎಂದಿರುವ ನ್ಯಾಯಾಲಯ, ಇಡಿಯ ಪ್ರಕರಣವನ್ನು ವಜಾ ಮಾಡಿದೆ.

No comments