Breaking News

ರುದ್ರೇಶ್‌ ಕೊಲೆ ಆರೋಪಿಗಳು ಕೇರಳದಿಂದ ತರಬೇತಿ ಪಡೆದಿದ್ದರು ಎನ್ಐಎ



ಬೆಂಗಳೂರು:  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆರೆಸ್ಸೆಸ್ ನಾಯಕ ರುದ್ರೇಶ್ ಕೊಲೆ ಪ್ರಕರಣದ ತನಿಖೆಯ ವಹಿಸಿಕೊಂಡು ಮಹತ್ವದ ಮಾಹಿತಿಯನ್ನು ಬಹಿರಂಗ ಪಡಿಸಿದೆ . ಎನ್ಐಎ ಮೂಲಗಳ ಪ್ರಕಾರ ಆರೋಪಿಗಳು ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಮತಾಂದ ಸಂಘಟನೆಯಿಂದ ತರಬೇತಿ ಪಡೆದು ಈ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಕ್ಟೋಬರ್ 16 ರಂದು ರುದ್ರೇಶ್ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಬಳಿ ಮೋಟಾರ್ ಬೈಕಿನಲ್ಲಿ ಬಂದ ನಾಲ್ಕು ಜನರ ಗ್ಯಾಂಗ್ ರುದ್ರೇಶ್ ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು ನಂತರದ ಬೆಳವಣಿಗೆಯಲ್ಲಿ ಪೊಲೀಸರು ರುದ್ರೇಶ್ ಹತ್ಯೆಯ ಪ್ರಮುಖ ಆರೋಪಿಗಳಾದ ವಸೀಮ್ ಅಹ್ಮದ್ (30), ಆಸ್ಟಿನ್ ಟೌನ್ ನಿವಾಸಿ ರಿಕಿ ನಗರ ಜೆಸಿ ನಗರ ಮೊಹಮ್ಮದ್ ಮಝರ್ (35), ಮೊಹಮ್ಮದ್ ಅಲಿಯಾಸ್ ಮೌಲ (44),  ಇರ್ಫಾನ್ ಪಾಶಾ (30) ಇವರುಗಳನ್ನು ಅಕ್ಟೋಬರ್ 27 ರಂದು ಬಂಧಿಸಲಾಯಿತು
 ನಂತರದ ಬೆಳವಣಿಗೆಯಲ್ಲಿ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡು ಆರೋಪಿಗಳ ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆ ನಡೆಸುವ ಮುಂಚೆ ಕೇರಳ ಮತ್ತು ಆಂಧ್ರ  ಪ್ರದೇಶದಲ್ಲಿ ಮತಾಂದ ಸಂಘಟನೆಗಳೊಂದಿಗೆ ಸೇರಿ ತರಬೇತಿ ಪಡೆದಿದ್ದರು ಎಂದು ಬಾಯಿ ಬಿಟ್ಟಿರುತ್ತಾರೆ. ಎನ್ಐಎ ಹಿರಿಯ ಅಧಿಕಾರಿ ಒಬ್ಬರು ಹೇಳುವ ಪ್ರಕಾರ ರುದ್ರೇಶ್ ಪ್ರಕರಣದ ಹೆಚ್ಚಿನ ತನಿಖೆಗೆ ಎನ್ಐಎ ಕೇರಳ ಮತ್ತು ಆಂಧ್ರ ಪ್ರದೇಶ ತೆರಳಲಿದೆ ಮತ್ತು ಆರೋಪಿಗಳು ತರಬೇತಿ ಪಡೆದ ಸ್ಥಳವನ್ನು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ 

No comments