Breaking News

ಹುಟ್ಟು ಹಬ್ಬ ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ ರಜಿನಿಕಾಂತ್



ಚೆನ್ನೈ : ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಡಿಸೆಂಬರ್ 12 ರಂದು ತಮ್ಮ 66 ನೇ  ವರ್ಷದ ಹುಟ್ಟು ಹಬ್ಬವನ್ನು ಆಚರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡು ಮಾಜಿ ಮುಖ್ಯ ಮಂತ್ರಿ ಜೆ ಜಯಲಲಿತಾ ಅವರು ಕೆಲವು ದಿನಗಳ ಹಿಂದೆ ಮರಣ ಹೊಂದಿದ ಕಾರಣ ಇಡೀ ರಾಜ್ಯ ಶೋಕಾಚರಣೆಯಲ್ಲಿ ಮುಳುಗಿದ್ದು ಮತ್ತು ಅವರಿಗೆ ಗೌರವ ನೀಡುವ ಹಿನ್ನಲೆಯಲ್ಲಿ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿ ಯಾವುದೇ ಪೋಸ್ಟರ್ ಹಾಕಬಾರದು ಎಂದು ಮನವಿ ಮಾಡಿರುತ್ತಾರೆ ಎಂದು ತಿಳಿದು ಬಂದಿದೆ 

No comments