ನೋಟು ನಿಶೇಧ ಬೆಂಬಲಿಸಿದ್ದ ಬಿಜೆಪಿ ನಾಯಕ 20 ಲಕ್ಷದೊಂದಿಗೆ ಅರೆಸ್ಟ್.
ತಮಿಳುನಾಡು : ಚೆನ್ನೈ ಬಿಜೆಪಿ ಯುವಮೋರ್ಚಾದ ನಾಯಕನನ್ನು ಪೋಲೀಸರು ಬಂದಿಸಿದ್ದು ಆತನಿಂದ 20ಲಕ್ಷಕ್ಕೂ ಅಧಿಕ ಹಣ ವಶಪಡಿಸಿಕೊಳ್ಳಲಾಗಿದೆ.
ಬಂದಿತ ಯುವಮೋರ್ಚಾ ನಾಯಕ ಅರುಣ್ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ 500 ಹಾಗೂ 1000 ಮುಖಬೆಲೆಯ ಹಳೆಯ ನೋಟ್ ನಿಶೇಧಮಾಡಿದ್ದನ್ನು ಬೆಂಬಲಿಸಿ ಪೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. "ನಾನು ಕೇಂದ್ರದ ನೋಟು ನಿಶೇಧ ಕ್ರಮ ಬೆಂಬಲಿಸುತ್ತಿದ್ದು ನಾಯಿ ದೇಶದ ವಿಕಾಸಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲಲು ತಯಾರಿದ್ದೇನೆ" ಎಂದಿದ್ದ. ಬಂದಿತ ಅರುಣ್ ಬಳಿ 100 ರೂಪಾಯಿಯ 1530 ನೋಟು, 50 ರೂಪಾಯಿಯ 1000 ನೋಟು ಇಷ್ಟೇ ಅಲ್ಲದೆ ಹೊಸ 2000 ರೂಪಾಯಿಯ 926 ನೋಟುಗಳು ಒಟ್ಟು 20.55 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ
ಈ ಕುರಿತು ಪ್ರತಿಕ್ರಿಯಿಸಿದ ಪೋಲೀಸರು 'ನಾವು ಅರುಣ್ ಬಳಿ ಈ ಹಣಕ್ಕೆ ಸಂಬಂಧಿಸಿದ ದಾಖಲೆ ನೀಡುವಂತೆ ಕೇಲಲಿಕೊಂಡೆವು ಆದರೆ ಅವರು ಯಾವುದೇ ದಾಖಲೆ ಒದಗಿಸಿಲ್ಲ ಹೀಗಾಗಿ ಹಣ ವಶಪಡಿಸಿಕೊಂಡು ಸರ್ಕಾರಕ್ಕೆ ಒಪ್ಪಿಸಿದ್ದೇವೆ.ಈತನ ಕೇಗೆ ಎರಡು ಸಾವಿರ ಮುಖಬೆಲೆಯ ಇಷ್ಟೊಂದು ನೋಟು ಹೇಗೆ ಬಂತು ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆನಡೆಸುತ್ತಿದ್ದು, ಹಣ ನೀಡಿದ ಬ್ಯಾಂಕ್'ನ ಪತ್ತೆಯಲ್ಲಿ ತೊಡಗಿದ್ದಾರೆ.
ಬಿಜೆಪಿ ಪ್ರಾದೇಶಿಕ ಅಧ್ಯಕ್ಷ ಸುಂದರ್'ರಾಜನ್ ಈ ಕುರಿತು ಮಾತನಾಡುತ್ತಾ 'ಈಗಾಗಲೇ ಅರುಣ್'ರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕಲಾಗಿದೆ' ಎಂದಿದ್ದಾರೆ. ಹಣದ ಕುರಿತು ದಾಖಲೆ ನೀಡುವಂತೆ ನೋಟೀಸ್ ನೀಡಿದ್ದು ಸರಿಯಾದ ಸಮರ್ಥನೆ ನೀಡದಡ ಹೋದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಬಿಜೆಪಿ ವಕ್ತಾರ ಹೇಳಿದ್ದಾರೆ.
No comments