ಶಿವಮೊಗ್ಗದಲ್ಲಿ ತಾಜೇನಿಯಾದ ಯುವತಿಯರ ಮೇಲೆ ಗುಂಪಿನಿಂದ ಹಲ್ಲೆ.
ಶಿವಮೊಗ್ಗ : KSRTC ಬಸ್'ನಲ್ಲಿ ಪ್ರಯಾಣ ಮಾಡುತ್ತಿದ್ದ 'ತಾಂಜೇನಿಯಾ'ದ ಇಬ್ಬರು ಯುವತಿಯರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ಬುಧವಾರ ರಾತ್ರಿ ನಡೆದಿದೆ.
ದಾಳಿಗೊಳಗಾದ ಯುವತಿಯರು 22 ವರ್ಷದ ಅನ್ನೆ ಸ್ವೇಯ ಹಾಗೂ 20 ವರ್ಷದ ಡಯಾನಾ ಕೆವಿನ್ ಎಂದು ತಿಳಿದು ಬಂದಿದೆ. ಅನ್ನೆ ಸ್ವೇಯ ಮಹಾರಾಷ್ಟ್ರದ ಸೋಲಾಪುರದಲ್ಲಿ MBA ವ್ಯಾಸಂಗ ಮಾಡುತ್ತಿದ್ದರೆ ಡಯಾನಾ ಹುಬ್ಬಳ್ಳಿಯಲ್ಲಿ ಬಿ-ಫಾರ್ಮಾ ಕಲಿಯುತ್ತಿದ್ದಾಳೆ.
ಇದರಲ್ಲಿ ಅನ್ನೆ'ಯ ಅಜ್ಜಿ ಬಹಳ ವರ್ಷಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಹಾಗಾಗಿ ಇಬ್ಬರು ಯುವತಿಯರು ಸಾಗರ ತಾಲೂಕಿನ ನರಸೀಪುರದ ಜನಪ್ರಿಯ ಆಯುರ್ವೇದ ಔಷದ ತಯಾರಕರಿಂದ ಔಷದ ಖರೀದಿಸಿ KSRTC ಬಸ್ಸಿನಲ್ಲಿ ಹುಬ್ಬಳ್ಳಿಗೆ ವಾಪಾಸಾಗುತ್ತಿದ್ದರು.
ಹೊನ್ನಳ್ಳಿ ಬಳಿ ಬಸ್ಸು ಹತ್ತಿದ ಯುವಕರ ಗುಂಪೊಂದು ಕಾಲಿ ಇದ್ದ ಬಸ್ ಸೀಟ್ ಮೇಲೆ ಯುವತಿಯರು ಕಾಲಿರಿಸಿದ್ದನ್ನು ಕಂಡು ತೆಗೆಯಲು ಹೇಳಿದರು, ಆದರೆ ಯುವತಿಯರು ಸೀಟ್ ಮೇಲೆ ಇಟ್ಟ ಕಾಲು ತೆಗೆಯಲು ನಿರಾಕರಿಸಿದರು. ಹೀಗೆ ಮಾತಿಗೆ ಮಾತು ಬೆಳೆದು ಯುವತಿಯರು ಹಾಗೂ ಗುಂಪಿನ ಮಧ್ಯೆ ಜಗಳವೇರ್ಪಟ್ಟಿತು ಆದರೆ ಕಂಡಕ್ಟರ್ ಮಧ್ಯಪ್ರವೇಶದಿಂದ ಗುಂಪು ಸುಮ್ಮನಾಯಿತು.ಆದರೆ ಬಸ್ ಶಿವಮೊಗ್ಗ ನಗರ ಪ್ರವೇಶಿಸುತ್ತಿದ್ದಂತೆಯೇ ಗುಂಪು ಇಬ್ಬರೂ ಯುವತಿಯರ ಮೇಲೆ ಹಲ್ಲೆನಡೆಸಿ ಸ್ಥಳದಿಂದ ಪರಾರಿಯಾಯಿತು.
ಶಿವಮೊಗ್ಗ ಪೋಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಯುವತಿಯರಿಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿದೆ. ಹಲ್ಲೆನಡೆಸಿದ ತಂಡದ ಬಗ್ಗೆ ಸುಳಿವು ಸಿಕ್ಕಿದ್ದು ಆದಷ್ಟು ಬೇಗ ಬಂದಿಸುವುದಾಗಿ ಶಿವಮೊಗ್ಗ ಎಸ್.ಪಿ ಅಭಿನವ್ ಖಾರೆ ಮಾದ್ಯಮಕ್ಕೆ ಹೇಳಿದರು.
No comments