Breaking News

ವೀಡಿಯೋ - ಬಿಜೆಪಿ ಯುವಮೋರ್ಚಾ ಅಧ್ಯಕ್ಷೆಯ ರಾಸಲೀಲೆ ವೀಡಿಯೋ ವೈರಲ್.

ಜಾರ್ಖಂಡ್ : ಜಾರ್ಖಂಡ್ ಆಡಳಿತ ಪಕ್ಷ ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆಯೊಬ್ಬಳ ರಾಸಲೀಲೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಾರ್ಖಂಡ್ (ಧನಬಾದ್) ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆಯಾದ ಗೀತಾ ಸಿಂಗ್ ರಾಸಲೀಲೆ ವೀಡಿಯೋ ಇದಾಗಿದ್ದು, ಕೆಲ ದಿನಗಳ ಹಿಂದೆಯಷ್ಟೇ ಪ್ರಸ್ತುತ ಅಧ್ಯಕ್ಷ ಚಂದ್ರಶೇಖರ್ ಸಿಂಗ್ ಅವರು ಗೀತಾಸಿಂಗ್'ಳನ್ನು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ನಾಮನಿರ್ದೇಶನ ಮಾಡಿದ್ದರು.
ವೀಡಿಯೋ ಕುರಿತು ಪ್ರತಿಕ್ರಿಯಿಸಿದ ಗೀತಾ ಸಿಂಗ್ " ಇದೊಂದು ರಾಜಕೀಯ ಪಿತೂರಿಯಾಗಿದ್ದು, ನನ್ನ ಹೆಸರಿಗೆ ಮಸಿ ಬಳಿಯಲು ಈ ರೀತಿ ಪ್ರಚಾರ ಮಾಡಿದ್ದಾರೆ. ಇದರಿಂದ ನನ್ನ ರಾಜಕೀಯ ಜೀವನಕ್ಕೆ ಪರಿಣಾಮ ಬೀರುವುದಿಲ್ಲ.  ಈಗಾಗಲೇ ಈ ಕುರಿತು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಪೋಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ" ಎಂದು ಹೇಳಿದರು.
ಕಾಂಗ್ರೆಸ್'ನ ಧನಬಾದ್ ಜಿಲ್ಲಾದ್ಯಕ್ಷ ಬಿ.ಪಿ.ಸಿಂಗ್ ಮಾತನಾಡುತ್ತಾ " ಕೇಂದ್ರ ಸರ್ಕಾರ ಮೊದಲು ತಮ್ಮ ಪಕ್ಷವನ್ನು ಸ್ವಚ್ಚಮಾಡಲಿ ಮತ್ತೆ ದೇಶವನ್ನು ಸ್ವಚ್ಛ ಮಾಡುವ ಕುರಿತು ಮಾತನಾಡಲಿ" ಎಂದಿದ್ದಾರೆ.


No comments