ಶಿಕ್ಷಕಿ ಜೊತೆ ಓಡಿ ಹೋದ ಶಾಲಾ ಬಾಲಕ.
ಬರೇಲಿ : 14 ವರ್ಷದ ಬಾಲಕ ತನ್ನ ಶಾಲಾ ಶಿಕ್ಷಕಿ ಜೊತೆ ಓಡಿಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಓಡಿ ಹೋಗೋ ಸಮಯದಲ್ಲಿ ತನ್ನ ಮನೆಯಿಂದ ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡಿ ಓಡಿಹೋಗಿದ್ದು ಪೋಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
22 ವರ್ಷ ವಯಸ್ಸಿನ ಶಾಲಾ ಶಿಕ್ಷಕಿ ಅದೇ ಶಾಲೆಯ ಮಾಲಕನ ಮಗಳಾಗಿದ್ದು ಡಿಸೆಂಬರ್ 1ರ ರಾತ್ರಿ ಈ ಘಟನೆ ನಡೆದಿದೆ. ಆದರೆ ನಾಪತ್ತೆಯಾಗಿರುವ ವಿಷಯ ಮರುದಿನ ಬೆಳಗ್ಗೆ ಮನೆಯವರಿಗೆ ಗೊತ್ತಾಗಿದ್ದು, ಶಿಕ್ಷಕಿಯ ಹೆತ್ತವರು ಕೂಡ ಮಗಳ ನಾಪತ್ತೆ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
"ನನ್ನ ಮಗ ಶಾಲಾ ಶಿಕ್ಷಕಿಯ ಜೊತೆ ಓಡಿಹೋಗಿದ್ದಾನೆ, ಇದೇ ಸಮಯದಲ್ಲಿ ಆತ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ 8,000 ಹಣವನ್ನು ಕೊಂಡು ಹೋಗಿದ್ದು, ಈ ಎಲ್ಲ ಕೆಲಸ ಆತ ಆಕೆಯ ಅಣತಿಯಂತೆ ಮಾಡಿದ್ದಾನೆ. ಶಿಕ್ಷಕಿಯ ನಡವಳಿಕೆ ಮೊದಲಿನಿಂದಲೇ ಸರಿ ಇರಲಿಲ್ಲ, ನನ್ನ ಮಗನನ್ನು ಮರಳುಮಾಡಿ ಆತನಿಂದ ಈ ಕಳ್ಳತನ ಮಾಡಿಸಿ ಓಡಿ ಹೋಗುವಂತೆ ಮಾಡಿದ್ದಾಳೆ" ಎಂದು ಬಾಲಕನ ತಂದೆ 'ರಾಮ್ ವೀರ್' ಹೇಳಿದ್ದಾರೆ.
ಬಾಲಕನ ತಂದೆ 'ರಾಮ್ ವೀರ್' ಫರೀದಾ ಬಾದ್'ನ ಸಣ್ಣ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾರೆ. "ಮಗ ನಾಪತ್ತೆಯಾದ ದಿನದಿಂದ ನಾನು ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದೇನೆ, ಆದರೆ ನನ್ನ ಮಗನ ಸುಳಿವು ಇದುವರೆಗೆ ಸಿಕ್ಕಿಲ್ಲ. ಆತನ ವಯಸ್ಸಿನಲ್ಲಿ ಆತನಿಗೆ ಇಂತಹ ದೊಡ್ಡ ನಡೆ ತೆಗೆದುಕೊಳ್ಳಲು ಮಾನಸಿಕ ಪ್ರಬುದ್ಧತೆ ಇಲ್ಲ, ಮಗನನ್ನು ಹುಡುಕಲು ನಾನು ಪೋಲೀಸರ ಸಹಾಯ ಪಡೆಯುತ್ತೇನೆ" ಎಂದರು.
ಆದರೆ ಹುಡುಗಿಯರ ಮನೆಯವರು ಕೂಡ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಬಾಲಕನ ಮನೆಯವರೇ ನಮ್ಮ ಮೇಲಿನ ಹಳೆಯ ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳಲು ಈ ರೀತಿ ನಾಟಕ ಮಾಡಿದ್ದಾರೆ ಎಂದಿದ್ದಾರೆ. "ನಾನು ಬಾಲಕನ ಸಂಬಂಧಿಕ ಶಿಕ್ಷಕರೊಬ್ಬರನ್ನು ಶಾಲೆಯಿಂದ ಹೊರಹಾಕಿದ್ದು, ಇದಕ್ಕಾಗಿ ಬಾಲಕನನ್ನು ಬಳಸಿಕೊಂಡು ನಮ್ಮ ಮೇಲೆ ಪ್ರತೀಕಾರ ತೀರಿಸಲು ಈ ರೀತಿ ಮಾಡಿದ್ದಾರೆ . ನಾವು ಈ ಕುರಿತು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ" ಎಂದು ಶಾಲೆಯ ಮಾಲಿಕ, ಹುಡುಗಿಯ ತಂದೆ ಮಾಧ್ಯಮಕ್ಕೆ ಹೇಳಿದ್ದಾರೆ.
"ಇದೊಂದು ವಿಚಿತ್ರ ಪ್ರಕರಣವಾಗಿದೆ. ಯುವತಿಯ ಕಡೆಯವರು ಬಾಲಕನ ಕಡೆಯವರು ಯುವತಿಯನ್ನು ಅಪಹರಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಮೇಲ್ನೋಟಕ್ಕೆ ಇಬ್ಬರೂ ಸ್ವಇಚ್ಛೆಯಿಂದ ಓಡಿಹೋಗಿರೋ ತರ ಭಾಸವಾಗುತ್ತಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಬರೇಲಿ ಗ್ರಾಮೀಣ ಪೋಲೀಸ್ ಠಾಣೆಯ ಎಸ್.ಐ ಯಮುನಾ ಪ್ರಸಾದ್ ಹೇಳಿದರು.
No comments