ದೆಹಲಿಯಲ್ಲಿ ಮತ್ತೆ ಮರುಕಳಿಸಿದ ನಿರ್ಭಯಾ ಅತ್ಯಾಚಾರ ಪ್ರಕರಣ.
ನವ ದೆಹಲಿ : ದೆಹಲಿಯಲ್ಲಿ ನಿರ್ಭಯ ಅತ್ಯಾಚಾರ ಹಾಗು ಕೊಲೆ ಪ್ರಕರಣ ನಡೆದು ನಿನ್ನಗೆ ನಾಲ್ಕು ವರ್ಷವಾಗಿದೆ. 2012 ಡಿಸೆಂಬರ್ 16 ರಂದು ಕಾಮುಕರ ಅಟ್ಟಹಾಸಕ್ಕೆ ನಲುಗಿ ಇಹಲೋಕ ತ್ಯಜಿಸಿದ ನಿರ್ಭಯಾಳ ಆ ಹೃದಯ ವಿದ್ರಾವಕ ಘಟನೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಹೀಗಿರುವಾಗ ಮತ್ತೆ ನಿನ್ನೆ ಅದೇ ಡಿಸೆಂಬರ್ 16 ರಂದು ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ.
ದೆಹಲಿಯ ಮೊತಿ ಬಾಗ್ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಕಾರಿನ ಒಳಗೆ ಕೂಡಿಹಾಕಿ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಅತ್ಯಾಚಾರ ನಡೆಸಲು ಬಳಸಿದ ಕಾರು ಗೃಹ ಸಚಿವಾಲಯಕ್ಕೆ ಸೇರಿದ್ದಾಗಿದ್ದು ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಅತ್ಯಾಚಾರ ನಡೆಸಿದ ಕಾರು ಚಾಲಕನನ್ನು ಕಾರು ಸಮೇತ ದೆಹಲಿ ಪೋಲೀಸರು ಬಂದಿಸಿದ್ದಾರೆ.
No comments