ನಕಲಿ ಹಿಂದುವನ್ನು ಪೋಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು.
ಕೋಟಾ, ಉಡುಪಿ : ಹಿಂದೂ ಜಾಗರಣ ವೇದಿಕೆ ಮತ್ತು ಭಜರಂಗದಳ ಕಾರ್ಯಕರ್ತರು ಕೋಟಾದಲ್ಲಿ ಹಿಂದೂ ಯುವತಿಯನ್ನು ಅನ್ಯಕೋಮಿನ ಯುವಕನಿಂದ ರಕ್ಷಿಸಿದ್ದಾರೆ. ತನ್ನನ್ನು ತಾನು ಹಿಂದೂ ಯುವಕನೆಂದು ಯುವತಿಗೆ ಪರಿಚಯಿಸಿಕೊಂಡಿದ್ದ ಸಮೀರ್,ಹಿಂದೂ ಯುವತಿಯನ್ನು ಮರಳುಮಾಡಿ ಅನೈತಿಕತೆಗೆ ಪ್ರಚೋದಿಸುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆಹಾಕಿದ ಹಿಂದೂ ಜಾಗರಣವೇದಿಕೆ ಹಾಗೂ ಕೋಟೇಶ್ವರ ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಯುವಕನನ್ನು ಹಿಡಿದು ಕೋಟಾ ಪೋಲೀಸರಿಗೆ ಒಪ್ಪಿಸಿದ್ದಾರೆ.
ಬಸ್ ಕಂಡಕ್ಟರ್ ಆಗಿ ಕೆಲಸಮಾಡುತ್ತಿರುವ ಸಮೀರ್ ಹಾಗೂ ಯುವತಿಗೆ ಬಸ್ಸಿನಲ್ಲಿ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿತ್ತು.ನಂತರ ಆತ ತನ್ನನ್ನು ಪ್ರೀತಿಸುವಂತೆ ಯುವತಿಗೆ ದುಂಬಾಲು ಬಿದ್ದಿದ್ದ. ಯುವತಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಸಮೀರ್ ಭಾನುವಾರ ಸಂಜೆ ಯುವತಿಯನ್ನು ಬೆದರಿಸಿ ತನ್ನ ಮನೆಗೆ ಬರುವಂತೆ ಬಲವಂತ ಮಾಡಿ ಕರೆದುಕೊಂಡು ಹೋಗುತ್ತಿದ್ದ. ಇದರ ಬಗ್ಗೆ ಮಾಹಿತಿಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.
ಈ ಹಿಂದೆಯೂ ಈತನ ಬಗ್ಗೆ ಮಹಿಳೆಯರಿಗೆ ಕಿರುಕುಳ ನೀಡಿದ ಬಗ್ಗೆ ಕೋಟಾ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾನೆ. ಸಮೀರ್'ನನ್ನು ಬಂಧಿಸಿರುವ ಪೋಲೀಸರು ಹಿರಿಯಡ್ಕ ಜೈಲಿಗೆ ರವಾನಿಸಿದ್ದಾರೆ.
No comments