Breaking News

ಸುಪ್ರೀಂ ಕೋರ್ಟ್ ನೋಟಿಸ್ ಪ್ರತಿ ನರೇಶ್ ಶೆಣೈಗೆ ನೀಡಿದ ಬಾಳಿಗಾ ತಂದೆ

ಅಸಹಾಯಕ ಬಾಳಿಗಾ ತಂದೆಯಿಂದ ನ್ಯಾಯಕ್ಕಾಗಿ ಹೋರಾಟ 
ಮಂಗಳೂರು : RTI ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು  ಕಳೆದ ಮಾರ್ಚ್ 21 ರಂದು ದುಷ್ಕರ್ಮಿಗಳು ಅವರನ್ನು  ಮನೆ ಮುಂದೆಯೇ ಹತ್ಯೆ ಮಾಡಿದ್ದರು .ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಹೈ ಕೋರ್ಟ್ ನಿಂದ ಜಾಮೀನು ಪಡೆದು ಹೊರ ಬಂದ ನಂತರ ವಿನಾಯಕ ಬಾಳಿಗಾ ಕುಟುಂಬಸ್ಥರು ನರೇಶ್ ಶೆಣೈ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು ,ವಿನಾಯಕ ಬಾಳಿಗಾ ಕುಟುಂಬಸ್ಥರು ಸಲ್ಲಿಸಿದ ಅರ್ಜಿಯನ್ನು ಮಾನ್ಯತೆ ಮಾಡಿದ ಸುಪ್ರೀಂ ಕೋರ್ಟ್ ನರೇಶ್ ಶೆಣೈ ವಿರುದ್ಧ ದಸ್ತಿ ನೋಟಿಸ್ ಜಾರಿಗೆ ಗೊಳಿಸಿತ್ತು .

ಈ ನೋಟಿಸ್ ಪ್ರತಿಯನ್ನು ಆರೋಪಿ ನರೇಶ್ ಶೆಣೈಗೆ ನೀಡಲಾಯಿತು.   ವಿನಾಯಕ ಬಾಳಿಗಾ ತಂದೆ ರಾಮಚಂದ್ರ ಬಾಳಿಗಾ ಶನಿವಾರ ಪೊಲೀಸ್ ರಕ್ಷಣೆಯೊಂದಿಗೆ ನರೇಶ್ ಮಾಲಕತ್ವದ ವಿವೇಕ್ ಟ್ರೇಡರ್ಸ್ ನಲ್ಲಿ ಈ ನೋಟಿಸ್ ಅನ್ನು ನರೇಶ್ ಶೆಣೈಗೆ ನೀಡಲಾಯಿತು ಎಂದು ತಿಳಿದು ಬಂದಿದೆ .

No comments