ಕೇಂದ್ರ ಸರ್ಕಾರದ ನೋಟು ನಿಶೇಧ ಕ್ರಮದ ಕುರಿತು ಮೊದಲ ಬಾರಿಗೆ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಪತ್ನಿ.
ಕೋಟಾ, ರಾಜಸ್ತಾನ : ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋಧಬೇನ್ ಕೇಂದ್ರ ಸರ್ಕಾರದ ನೋಟು ನಿಶೇಧದ ಕ್ರಮವನ್ನು ಸಮರ್ಥಿಸಿದ್ದಾರೆ. ನೋಟು ನಿಶೇಧದ ಕ್ರಮ ಭ್ರಷ್ಟಾಚಾರದ ಜೊತೆಗೆ ಕಪ್ಪುಹಣವನ್ನೂ ತಡೆಗಟ್ಟುತ್ತದೆ. ಕೇಂದ್ರ ಸರ್ಕಾರ ದೇಶದ ಉದ್ದಾರ ಹಾಗೂ ಅಭಿವೃದ್ಧಿಗೆ ಇನ್ನು ಮುಂದೆಯೂ ಇಂತಹ ಉತ್ತಮ ಕೆಲಸಗಳನ್ನು ಜಾರಿಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ಮುಖಬೆಲೆಯ ನೋಟು ನಿಶೇಧ ಮಾಡುವ ಮೂಲಕ ಕಪ್ಪು ಹಣ ಹಾಗೂ ಭ್ರಷ್ಟಾಚಾರವನ್ನು ಮಟ್ಟಹಾಕಿದೆ. ಈ ಕ್ರಮ ಹೊರದೇಶದಲ್ಲಿರುವ ಕಪ್ಪುಹಣವನ್ನು ವಾಪಾಸ್ ತರಲು ಸಹಕಾರಿಯಾಗಲಿದೆ ಎಂದರು.
ಜಶೋಧಬೇನ್ ರಾಜಸ್ಥಾನದ ಕೋಟಾದಲ್ಲಿ ಕಾರ್ಯ ಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು ಕೇಂದ್ರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಜಶೋಧಬೇನ್ ಅವರನ್ನು ಪ್ರಶ್ನಿಸಿದಾಗ "ಅವರು ಕೇಂದ್ರ ಸರ್ಕಾರದ ಇದುವರೆಗಿನ ಕೆಲಸಗಳನ್ನು ಹೊಗಳಿದರು, ಮುಂದೆಯೂ ದೇಶದ ಪ್ರಗತಿಗೆ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಉತ್ತಮ ಕೆಲಸಗಳನ್ನು ಮಾಡಲಿದೆ ಜೊತೆಗೆ ದೇಶದ ಜನರ ಏಳಿಗೆಗೆ ಶ್ರಮಿಸಲಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
No comments