ಡಿವಿಎಸ್ ಪುತ್ರ ಕಾರ್ತಿಕ್ ಗೌಡ ವಿರುದ್ದದ ಚಾರ್ಜ್‍ಶೀಟ್ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು : ಡಿವಿಎಸ್ ಪುತ್ರ ಕಾರ್ತಿಕ್ ಗೌಡ ವಿರುದ್ದ ನಟಿ ಮೈತ್ರಿಯಾ ಗೌಡಗೆ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ಕಾರ್ತಿಕ್ ಗೌಡ ವಿರುದ್ದದ ಚಾರ್ಜ್‍ಶೀಟ್ ರದ್ದು ಮಾಡಿದೆ .
ಮದುವೆಯಾಗುವುದಾಗಿ ನಂಬಿಸಿ ಕಾರ್ತಿಕ್ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ಆರ್ ಟಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂತೆಯೇ ಪೊಲೀಸರು ಕಾರ್ತಿಕ್ ವಿರುದ್ಧದ ಚಾರ್ಜ್‍ಶೀಟ್ ನ್ನು ಹೈಕೋರ್ಟ್‍ಗೆ ಸಲ್ಲಿಸಿದ್ದರು. ಆದ್ರೆ ಇದೀಗ ಹೈಕೋರ್ಟ್ ಈ ಚಾರ್ಜ್‍ಶೀಟನ್ನು ರದ್ದು ಮಾಡಿದೆ. ಈ ಮೂಲಕ ಕಾರ್ತಿಕ್ ತಮ್ಮ ವಿರುದ್ಧದ ಆರೋಪಕ್ಕೆ ಪೂರ್ಣ ವಿರಾಮ ಬಿದ್ದಿದೆ
No comments