ಬಿಜೆಪಿ ಕಾಂಗ್ರೆಸ್ ನಾಯಕರ ವಾಕ್ ಸಮರಕ್ಕೆ ಬಲಿಯಾದ ಎತ್ತಿನ ಹೊಳೆ ಸಭೆ
ಬೆಂಗಳೂರು : ಕರಾವಳಿ ಭಾಗದ ಜನರ ತೀವ್ರ ವಿರೋಧದ ಯೋಜನೆಯಾದ ಎತ್ತಿನ ಹೊಳೆ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯ ಮಂತ್ರಿ ಸಿಎಂ ಸಿದ್ದರಾಮಯ್ಯನವರು ಎತ್ತಿನ ಹೊಳೆ ಯೋಜನೆ ವಿರೋಧಿ ಹೋರಾಟಗಾರರು ,ಕರಾವಳಿಯ ಮಾಜಿ ಶಾಸಕರು ಮತ್ತು ಜನಪ್ರತಿನಿಧಿಗಳ ಸಭೆಯನ್ನು ಗ್ರಹಕಚೇರಿ ಕೃಷ್ಣದಲ್ಲಿ ನಡೆಯಿತು .
ಇದೀಗ ಬಂದ ವರದಿಯಂತೆ ಎತ್ತಿನಹೊಳೆ ಯೋಜನೆ ಸಮಸ್ಯೆ ಪರಿಹರಿಸಲು ಸಿಎಂ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿದೆ ಎಂದು ತಿಳಿದು ಬಂದಿದೆ .
ಇಡೀ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಾತಿನ ಕಚ್ಚಾಟದಿಂದ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆ ವಿಫಲವಾಗಿದೆ.
ಯೋಜನೆ ಅನುಮೋದನೆ ಸಂಬಂಧ ಉಭಯ ಪಕ್ಷಗಳ ನಾಯಕರ ನಡುವೆ ವಾಗ್ವಾದ ನಡೆದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಯೋಜನೆಗೆ ಅನುಮೋದನೆ ದೊರೆತಿದ್ದು, ಈಗ ಕಾಂಗ್ರೆಸ್ ಸರ್ಕಾರ ಮುಂದುವರೆಸುತ್ತಿದೆ ಎಂದು ಸರ್ಕಾರದ ಪರವಾಗಿ ಸಚಿವರಾದ ಎಂ.ಬಿ. ಪಾಟೀಲ್, ಮತ್ತು ರಮಾನಾಥರೈ ವಾದಮಾಡಿದರು.
ಯೋಜನೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಸರ್ಕಾರ ಹೇಳುವಷ್ಟು ನೀರು ಬರುವುದಿಲ್ಲ. ಸರ್ಕಾರ ಕರಾವಳಿ ಮತ್ತು ಬಯಲು ಸೀಮೆಯ ಎರಡೂ ಕಡೆಯ ಜನರಿಗೆ ಮಂಕು ಬೂದಿ ಎರಚುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ವಾದ ಮಾಡಿದ್ದಾರೆ. ಆದ್ರೆ, ಸರ್ಕಾರ ಯೋಜನೆಯನ್ನು ಮುಂದುವರೆಸುವುದಾಗಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದು, ಅಗತ್ಯ ಬಿದ್ದರೆ, ಕರಾವಳಿ ಭಾಗದ ಜನರ ಜೊತೆಗೂ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹೇಳಿದರು
No comments