ಮಂಡ್ಯದಲ್ಲಿ ರಾಜಕೀಯ ಘರ್ಷಣೆ, ಇಬ್ಬರು ಜೆಡಿಎಸ್ ಕಾರ್ಯಕರ್ತರು ಬಲಿ.
ಮಂಡ್ಯ : ಮಂಡ್ಯ ಜಿಲ್ಲೆಯ ತೊಪ್ಪನ ಹಳ್ಳಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಬ್ಯಾನರ್ ಹಾಗೂ ನೀರಿನ ವಿಷಯವಾಗಿ ನಡೆದ ಘರ್ಷಣೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಘರ್ಷಣೆಗೆ ಬಲಿಯಾದವರನ್ನು ಜೆಡಿಎಸ್ ಕಾರ್ಯಕರ್ತರಾದ ನಂದೀಶ್ ಹಾಗೂ ಮುತ್ತುರಾಜ್ ಎಂದು ಗುರುತಿಸಲಾಗಿದ್ದು, ಮೂರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸದ್ಯ ತೊಪ್ಪನಹಳ್ಳಿಯಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಪೋಲೀಸರು ಗಲಭೆಗೆ ಸಂಬಂಧಿಸಿದಂತೆ ಮದ್ದೂರು ಪೋಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ರಾಜಕೀಯ ಘರ್ಷಣೆಗೆ ತೊಪ್ಪನಹಳ್ಳಿ ತತ್ತರಿಸಿಹೋಗಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳೋ ಮೂಲಕ ಗ್ರಾಮದಲ್ಲಿ ಮತ್ತೆ ಶಾಂತಿ ಸುವ್ಯವಸ್ಥೆ ನೋಡಿಕೊಳ್ಳುವಂತೆ ಗ್ರಾಮಸ್ಥರು ಪೋಲೀಸರಿಗೆ ಮನವಿ ಮಾಡಿದ್ದಾರೆ. ಗಲಭೆಯಲ್ಲಿ ಸಾವಿಗೀಡಾದ ಯುವಕರ ಕುಟುಂಬಸ್ತರ ರೋದನ ಮುಗಿಲುಮುಟ್ಟಿದೆ.
No comments