isis ಶಂಕಿತ ಉಗ್ರನ ಬಿಡುಗಡೆ ಮಾಡಿದ NIA
ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರ ಕೇರಳ ಮೂಲದ ಮುನಾಫ್ ರಹೆಮಾನ್ ನಲಕತ್ ಅನ್ನು ಎನ್‌ಐಎ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದರು.ಇದೀಗ ರಹೆಮಾನ್ ನಲಕತ್ ಅನ್ನು ಹಲವು ಸುತ್ತಿನ ವಿಚಾರಣೆಗೆ ಒಳ ಪಡಿಸಿ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ .ಕಳೆದ ಕೆಲ ದಿನಗಳಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯತ್ತ ಈತ ಆಕರ್ಷಿತನಾಗಿ ಮಾನಸಿಕವಾಗಿ ಐಸಿಸ್ ಸೇರ್ಪಡೆಯಾಗುವ ಸಿದ್ದತೆಯಲ್ಲಿದ್ದ ಎಂದು ಹೇಳಲಾಗಿದೆ.ಆತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ .ಮುನಾಫ್ ಬಳಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದ್ದು, ಪಾಸ್‌ಪೋರ್ಟನ್ನು ಜಪ್ತಿ ಮಾಡಲಾಗಿದೆ. ಎನ್‌ಐಎ ತನಿಖೆಗೆ ಕರೆದಾಗ ಹಾಜರಾಗಬೇಕು, ವಿದೇಶ ಪ್ರಯಾಣ ಮಾಡಬಾರದು ಎಂದು ಷರತ್ತುಗಳನ್ನೊಳಗೊಂಡ ನೊಟೀಸ್ ನೀಡಲಾಗಿರುವ ಬಗ್ಗೆ ವರದಿಯಾಗಿದೆ.
No comments