Breaking News

ಮಗಳ ಮದುವೆಗೆ 50 ವಿಮಾನ ಬಳಸುತ್ತಿರುವ ಮಾದ್ಯಮಗಳ ವರದಿ ತಳ್ಳಿಹಾಕಿದ ನಿತಿನ್ ಗಡ್ಕರಿ

ಕಾನ್ಪುರ : ಕಾನ್ಪುರದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಕೇಂದ್ರ ಸಚಿವ ಗಡ್ಕರಿ ಮಗಳ ಮದುವೆಗೆ ವಿಐಪಿ ಅತಿಥಿಗಳನ್ನು ಕರೆತರಲು 50 ವಿಮಾನಗಳನ್ನು ಬಳಸಲಾಗುತ್ತಿದೆ ಎಂಬ ಸುದ್ದಿ ಇಂದು ಬೆಳಗ್ಗೆಯಿಂದ ಮಾಧ್ಯಮದಲ್ಲಿ ಪ್ರಕಟವಾಗುತ್ತಿವೆ.
ಈ ಬಗ್ಗೆ ಪ್ರತಿಕ್ರಿಸಿದ ನಿತಿನ್ ಗಡ್ಕರಿ,  ತನ್ನ ಮಗಳ ಮದುವೆಗೆ 50 ವಿಮಾನ ಬಳಸುತ್ತಿಲ್ಲ, ಮಾಧ್ಯಮಗಳಿಗೆ ಯಾರೋ ಸುಳ್ಳು ಸುದ್ದಿ ನೀಡಿದ್ದಾರೆ ಎಂದು ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದ್ದಾರೆ.
ಗಡ್ಕರಿ ಮಗಳ ಮದುವೆಗೆ ಬರುವ 10,000 ವಿಐಪಿ ಅತಿಥಿಗಳನ್ನು ಕರೆತರಲು 50 ವಿಮಾನಗಳನ್ನು ಬಳಸಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

No comments