ಗರ್ಭಿಣಿ ಡ್ಯಾನ್ಸರನ್ನು ಗುಂಡು ಹಾರಿಸಿಕೊಂದ ಕುಡುಕ.
ಪಂಜಾಬ್ : ಪಂಜಾಬ್'ನ ಬಾತಿನ್ಡ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ನೃತ್ಯಮಾಡಲು ಆಗಮಿಸಿದ್ದ ಯುವತಿಯ ಮೇಲೆ ಕುಡುಕನೊಬ್ಬ ಗುಂಡು ಹಾರಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.ಗುಂಡು ತಗುಲಿದ ಯುವತಿ ಗರ್ಬಿಣಿಯಾಗಿದ್ದಳು, ಗುಂಡು ಸೀದಾ ತಲೆಗೆ ಹೊಕ್ಕಿಂದರಿಂದ ಆಸ್ಪತ್ರೆ ತಲುಪುವ ಮೊದಲೇ ಯುವತಿ ಮೃತಪಟ್ಟಿದ್ದಾಳೆ.
ಘಟನೆ ಶನಿವಾರ ರಾತ್ರಿ ನಡೆದಿದ್ದು ಸ್ಥಳೀಯ ವ್ಯಾಪಾರಿಯೊಬ್ಬನ ಮಗನ ಮದುವೆ ಕಾರ್ಯಕ್ರಮದ ಪ್ರಯುಕ್ತ ನೃತ್ಯ ತಂಡ ಕರೆಸಲಾಗಿತ್ತು. ಮೃತಪಟ್ಟ ಯುವತಿ ಕುಲ್ವಿಂದರ್ ಕೌರ್ ಇದೇ ತಂಡದೊಂದಿಗೆ ನೃತ್ಯ ಮಾಡಲು ಆಗಮಿಸಿದ್ದಳು. ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಕುಡಿದು ಬಂದೂಕಿನೊಂದಿಗೆ ಗಾಳಿಯಲ್ಲಿ ಗುಂಡು ಹಾರಿಸುತ್ತಾ ಆಗಮಿಸಿದ ವರನ ಗೆಳೆಯರು ಸ್ಟೇಜ್ ಹತ್ತಲು ಯತ್ನಿಸಿದರು ಆಗ ಅವರನ್ನು ಸ್ಟೇಜ್ ಹತ್ತುವುದರಿಂದ ತಡೆಯಲಾಯಿತು.
ಆಗ ಅದರಲ್ಲಿ ಒಬ್ಬಾತ ತನ್ನಲ್ಲಿದ್ದ ಬಂದೂಕಿನಿಂದ ಸ್ಟೇಜ್ ಮೇಲೆ ನೃತ್ಯ ಮಾಡುತ್ತಿದ್ದ ಕುಲ್ವಿಂದರ್ ಮೇಲೆ ಗುಂಡು ಹಾರಿಸಿದ್ದಾನೆ. ಆ ಗುಂಡು ಆಕೆಯ ತಲೆಯನ್ನು ಹೊಕ್ಕಿತ್ತು. ಅಲ್ಲೇ ಕುಸಿದು ಬಿದ್ದ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿತಾದರು ಆಕೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಪ್ರಕರಣ ಸಂಬಂಧ ನಾಲ್ವರ ಮೇಲೆ ಕೊಲೆ ಕೇಸು ದಾಖಲಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಬಿಲ್ಲ ಹಾಗೂ ಆತನ ಗೆಳೆಯರು ತಲೆಮರೆಸಿಕೊಂಡಿದ್ದಾರೆ.
No comments