Breaking News

ಜನಾರ್ಧನ ಪೂಜಾರಿ ಮತ್ತು ನಾನು ಅಶೋಕ ವನದ ಸೀತೆಯಂತೆ


ಮೈಸೂರ್ : ಕಾಂಗ್ರೆಸ್ ಮಾಜಿ ಸಂಸದ ಎಚ್ ವಿಶ್ವನಾಥ್ ಅವರು ರಾಜ್ಯ ಕಾಂಗ್ರೆಸ್ ಗೆ  ಟಾಂಗ್ ನೀಡಿದ್ದಾರೆ  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಎಚ್ ವಿಶ್ವನಾಥ್ ಅವರು ಜನಾರ್ಧನ ಪೂಜಾರಿ ಮತ್ತು ನಾನು ಅಶೋಕ ವನದಲ್ಲಿದ್ದ ಸೀತೆಯಂತೆ, ಇತಿಹಾಸದಲ್ಲಿ ಸೀತೆ ಹೇಗೆ ರಾಮನಿಗೆ ನಿಷ್ಠೆ ತೋರಿದ್ದಾರೆ ಹಾಗೆ ನಾನು ಮತ್ತು ಜನಾರ್ಧನ ಪೂಜಾರಿ ಕಾಂಗ್ರೆಸ್ ಪಕ್ಷದ ನಿಯತ್ತಿನ ಸಿಪಾಯಿಗಳು ,ಇಂದಿನ ಕರ್ನಾಟಕ ಕಾಂಗ್ರೆಸ್ ನಲ್ಲಿ ನಮ್ಮ ಸಲಹೆಗಳನ್ನು ಗಾಳಿಗೆ ತೂರಲಾಗುತಿದೆ ,ಜನಾರ್ಧನ ಪೂಜಾರಿ ಅವರ ಬಗ್ಗೆ ಅಭಿಮಾನವಿದೆ ,ಮತ್ತು ಅವರ ಬೆಂಬಲಕ್ಕೆ ನಾನು ಸದಾ ನಿಲ್ಲುತ್ತೇನೆ ಎಂದು ಎಚ್ ವಿಶ್ವನಾಥ್ ಹೇಳಿದರು .
ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿರುವ  ಬಗ್ಗೆ ಕೂಡ  ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಕಿಡಿಕಾರಿದರು ಎಂದು ತಿಳಿದು ಬಂದಿದೆ 

No comments