ತಮಿಳುನಾಡಿನಲ್ಲಿ ಜಯಲಲಿತಾಗೆ ದೇವಸ್ಥಾನ ನಿರ್ಮಾಣ ?
ಚೆನ್ನೈ : ತಮಿಳು ನಾಡಿನಲ್ಲಿ ಮಾಜಿ ಮುಖ್ಯ ಮಂತ್ರಿ ಜಯಲಿಲಿತಾ ಕಟ್ಟರ್ ಬೆಂಬಲಿಗನಾದ ಎಂ. ಸ್ವಾಮಿನಾಥನ್ ತಂಜಾವೂರಿನಲ್ಲಿ ಜಯಲಲಿತಾ ಅವರಿಗೆ ದೇವಸ್ಥಾನ ನಿರ್ಮಿಸುತ್ತಿದ್ದಾರೆ .ಸ್ವಾಮಿನಾಥನ್ ತಂಜಾವೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯನಾಗಿರುತ್ತಾರೆ .
140 ಚದರ ಅಡಿ ವಿಸ್ತೀರ್ಣದಲ್ಲಿ ಇದು ನಿರ್ಮಾಣವಾಗಲಿದ್ದು, ದೇವಸ್ಥಾನದ ಗರ್ಭಗುಡಿಯಲ್ಲಿ ಜಯಾ ಅವರ 1.5 ಅಡಿ ಎತ್ತರದ ಕಂಚಿನ ಮೂರ್ತಿ ಇರಲಿದೆ. ದೇವಸ್ಥಾನಕ್ಕೆ ‘ಪುರುಚ್ಚಿ ತಲೈವಿ ಅಮ್ಮ ಆಲಯಂ’ ಎಂಬ ಹೆಸರಿಡಲಾಗಿದೆ. ಗರ್ಭಗುಡಿಯಲ್ಲಿ ಎಂ.ಜಿ. ರಾಮಚಂದ್ರನ್ ಹಾಗೂ ಸಿ.ಎನ್. ಅಣ್ಣಾದೊರೈ ಪ್ರತಿಮೆಗಳೂ ಇರಲಿವೆ.ಜಯಲಲಿತಾ ಅವರ ಜನ್ಮದಿನವಾದ ಫೆಬ್ರುವರಿ 24ರಂದು ದೇವಸ್ಥಾನದ ಉದ್ಘಾಟನೆ ಆಗಲಿದೆ ಎಂದು ಎಂ. ಸ್ವಾಮಿನಾಥನ್ ಹೇಳಿದ್ದಾರೆ .
source -prajavaani
No comments