Breaking News

ಬೇನಾಮಿ ಆಸ್ತಿಯತ್ತ ಪ್ರಧಾನಿ ಕಣ್ಣು


ನವದೆಹಲಿ : ಸಾವಿರ ಮತ್ತು ಐನೂರರ ನೋಟ್ ಬ್ಯಾನ್ ಮಾಡಿ ಕಾಳ ಧನಿಕರಿಗೆ ಬಿಸಿಮುಟ್ಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ  ಬೇನಾಮಿ ವಹಿವಾಟು ತಡೆಯಲು ಪರಿಣಾಮಕಾರಿ ಕಾನೂನನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು ಎಂದು ಈ ವರ್ಷದ ಕೊನೆಯ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಹೇಳಿದರು .ನೋಟ್ ನಿಷೇಧದ ಬಗ್ಗೆ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿ ನೋಟ್ ಬ್ಯಾನ್ ಕ್ರಮವನ್ನು  ಅನ್ನು  ಸಮರ್ಥಿಸಿಕೊಂಡರು.
ಬೇನಾಮಿ ಆಸ್ತಿ ಕಾಯ್ದೆ: 1988ರಲ್ಲಿ ಜಾರಿಗೆ ಬಂದ ಬೇನಾಮಿ ಆಸ್ತಿ ಕಾಯ್ದೆಯ ಬಗ್ಗೆ ಪ್ರಧಾನಿ ಉಲ್ಲೇಖಿಸಿ ಈ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಿರಲಿಲ್ಲ, ಅಧಿಸೂಚನೆಯಲ್ಲಿ ಪ್ರಕಟಿಸಿರಲಿಲ್ಲ.

‘ಈ ಕಾಯ್ದೆಯನ್ನು ನಾವು ಪ್ರಬಲಗೊಳಿಸಿದ್ದೇವೆ. ಇದು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ಜನರ ಹಾಗೂ ದೇಶದ ಒಳಿತಿಗಾಗಿ ಮಾಡಬೇಕಿರುವುದನ್ನೆಲ್ಲ ನಾವು ಆದ್ಯತಾ ವಿಷಯವನ್ನಾಗಿ ಪರಿಗಣಿಸುತ್ತೇವೆ’ ಎಂದು ಹೇಳಿದರು.ಜನರ ಸಹಾಯದಿಂದ ಕಾಳ ಧನಿಕರನ್ನು ಪತ್ತೆ ಹಚ್ಚಲಾಗುತ್ತಿದೆ , ಈ ಕಾರ್ಯದಲ್ಲಿ ಸಾರ್ವಜನಿಕರ ಸಹಾಯ ಮುಂದೆಯೂ ಬೇಕು ಎಂದು  ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಹೇಳಿದರು.

No comments