ತಳಮಟ್ಟದಿಂದ ಪಕ್ಷ ಸಂಘಟನೆ ಕುಮಾರಸ್ವಾಮಿ
ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗದ್ದುಗೆ ಏರುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ. ಪಕ್ಷ ಸಂಘಟನೆಗಾಗಿ 12 ನಾಯಕರನ್ನು ಒಳಗೊಂಡ ನಾಲ್ಕು ತಂಡಗಳು 10 ದಿನಗಳ ಕಾಲ ಜಿಲ್ಲಾ ಪ್ರವಾಸ ನಡೆಸಲಿವೆ ಎಂದು ಕುಮಾರಸ್ವಾಮಿ ಹೇಳಿದರು .
ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಅತ್ಯಂತ ಸದೃಢವಾಗಿ ಕಟ್ಟಿ ಬೆಳೆಸುವುದು ನಮ್ಮ ಉದ್ದೇಶ. 2004, 2008 ಮತ್ತು 2013 ರ ವಿಧಾನಸಭಾ ಚುನಾವಣೆಗಳಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ನಾವು ಅತ್ಯಲ್ಪ ಮತಗಳ ಅಂತರದಲ್ಲಿ ಸೋತಿದ್ದೇವೆ. ಹೀಗೆ 300 ಮತಗಳಿಂದ 5,000 ಮತಗಳ ಅಂತರದಲ್ಲಿ ಸೋತಿರುವ ಕ್ಷೇತ್ರಗಳ ಸಂಖ್ಯೆ ಸುಮಾರು 30 ರಿಂದ 40. ಇಲ್ಲಿ ಪಕ್ಷವನ್ನು ಬಲಪಡಿಸಿ ಅವುಗಳನ್ನು ಮರು ವಶಕ್ಕೆ ತೆಗೆದುಕೊಳ್ಳಲು ಅಗತ್ಯ ಕಾರ್ಯತಂತ್ರ ರೂಪಿಸುವುದೂ ಜಿಲ್ಲಾ ಪ್ರವಾಸದ ಮುಖ್ಯ ಉದ್ದೇಶ ಆಗಿದೆ ಎಂದು ಅವರು ಹೇಳಿದರು.
ಅಲ್ಲದೆ, ಇದೇ 19 ರಿಂದ 23 ರ ವರೆಗೆ ಮುಂಬೈ ಕರ್ನಾಟಕ ಪ್ರದೇಶಗಳಲ್ಲಿ ಪ್ರವಾಸ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು.
source- prajavani
No comments