Breaking News

ಉಗ್ರನ ಕುಟುಂಬಕ್ಕೆ ಪರಿಹಾರ ನೀಡಿದ ಜಮ್ಮು ಕಾಶ್ಮೀರ ಸರಕಾರ ?


ಸದಾ ಒಂದಲ್ಲ ಒಂದು ವಿವಾದದಲ್ಲಿ ಇರುವ ಜಮ್ಮು ಕಾಶ್ಮೀರ ಸರ್ಕಾರ ಉಗ್ರ ಖಾಲಿದ್‌ ಮುಜಾಫರ್‌ ವಾನಿ  ಕುಟುಂಬಕ್ಕೆ  4 ಲಕ್ಷ ರೂ. ಪರಿಹಾರ ಪ್ರಕಟಿಸಿ ಹೊಸ ವಿವಾದವನ್ನು ಹುಟ್ಟಿ ಹಾಕಿದೆ . ಉಗ್ರ ಖಾಲಿದ್‌ ಕಳೆದ ವರ್ಷ ಏಪ್ರಿಲ್‌ 13ರಂದು  ಬುರ್ಹಾನ್‌ ವಾನಿ ಸಹೋದರ ಖಾಲಿದ್‌ ಮುಜಾಫರ್‌ ವಾನಿ  ಬಚ್ಚೂ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಬಲಿಯಾಗಿದ್ದ.
ಜಮ್ಮು ಕಾಶ್ಮೀರದಲ್ಲಿ  ಉಗ್ರ ಸಂಬಂಧಿ ಹಿಂಸಾಚಾರಗಳಿಗೆ ಬಲಿಯಾದ 17 ಮಂದಿಯ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 4 ಲಕ್ಷ ರೂ. ಪರಿಹಾರ ಪ್ರಕಟಿಸಿದೆ. ಅವರಲ್ಲಿ ಬುರ್ಹಾನ್  ವಾನಿ ಸಹೋದರ ಖಾಲಿದ್‌ ಹೆಸರು ಸೇರಿರುವುದು ವಿವಾದಕ್ಕೆ ಕಾರಣ. ಈ ಸಂಬಂಧ ಅಂತಿಮ ಆದೇಶ ಇನ್ನೂ ಹೊರಬಿದ್ದಿಲ್ಲ. ಪರಿಹಾರಕ್ಕೆ ಆಯ್ಕೆಯಾದ ಕುಟುಂಬಗಳ ಪಟ್ಟಿ ಸಿದ್ಧಪಡಿಸಿ, ಆಕ್ಷೇಪ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ವಾನಿ ಕುಟುಂಬವನ್ನು ಪರಿಹಾರಕ್ಕೆ ಆಯ್ಕೆ ಮಾಡಿರುವುದು ಭದ್ರತಾ ಸಂಸ್ಥೆಗಳ ಅಸಮಾಧಾನಕ್ಕೆ ಕಾರಣವಾಗಿದೆ.
source- vk

No comments