Breaking News

ಪಾಕ್‌ ಧ್ವಜದ ಜತೆ ಫೋಟೊ ಧಾರವಾಡ ಯುವಕನ ಬಂಧನ


ಧಾರವಾಡ : ಪಾಕಿಸ್ತಾನ ಧ್ವಜ ಹಿಡಿದು ತೆಗೆಸಿಕೊಂಡ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ ಈದ್ ಮಿಲಾದ್ ಶುಭಾಶಯ ಕೋರಿದ್ದ ಯುವಕನನ್ನು ದೇಶದ್ರೋಹ ಆರೋಪದಡಿ ಹು-ಧಾ ಮಹಾನಗರ ಪೊಲೀಸರು ಬಂಧಿಸಿದ್ದಾರೆ.
ತೇಜಸ್ವಿನಗರದ ಅಫ್ತಾಬ್‌ ತಡಕೋಡ (18) ಬಂಧಿತ ಆರೋಪಿ. ಸೋಮವಾರ ಪಾಕಿಸ್ತಾನ ಧ್ವಜ ಹಿಡಿದು ತೆಗಿಸಿಕೊಂಡಿದ್ದ ಫೋಟೊ ಅಪಲೋಡ್ ಮಾಡಿದ್ದ ಈತನ ವಿರುದ್ಧ ಶಿವಾನಂದ ಸತ್ತಿಗೇರಿ ಎಂಬುವವರು ದೂರು ನೀಡಿದ್ದರು. ಐಪಿಸಿ ಸೆಕ್ಷನ್ 295,153 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ಈತನ್ನು ಬಂಧಿಸಿದ್ದಾರೆ.

No comments