ಹನ್ನೊಂದು ಗಂಡಂದಿರ ಕಿರಾತಕಿ ಹೆಂಡತಿ ಕೊನೆಗೂ ಪೋಲೀಸ್ ಬಲೆಗೆ.
ಕೇರಳ : ಕೇಂದ್ರ ಸರ್ಕಾರ ಇಸ್ಲಾಂನಲ್ಲಿನ ಬಹುಪತ್ನಿತ್ವ ತಡೆಯಲು ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಪ್ರಯತ್ನಿಸುತ್ತಿದ್ದರೆ ಕೇರಳದ ಯುವತಿಯೊಬ್ಬಳು 11 ಮದುವೆಯಾಗಿ ಈಗ ಪೋಲೀಸರ ಅತಿಥಿಯಾಗಿದ್ದಾಳೆ.
ಕೇರಳದ ಮೂಲದ ಯುವತಿಯನ್ನು ಪೋಲೀಸರು ವಂಚನೆ ಆರೋಪದ ಮೇಲೆ ಬಂಧಿಸಿದ್ದು , ಪೋಲೀಸರು ಆಕೆಯನ್ನು ತನಿಖೆ ನಡೆಸಿದಾಗ ಆಕೆ ತನಗೆ 11ಮದುವೆಯಾಗಿರುವ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಕೇವಲ ಹಣಕ್ಕಾಗಿ ಮದುವೆಯಾಗುತ್ತಿದ್ದ ಈಕೆ ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡನ ಮನೆಯವರಿಗೆ ಅಮಲು ಪದಾರ್ಥ ನೀಡಿ ಮನೆಯನ್ನು ದೋಚಿಕೊಂಡು ಪರಾರಿಯಾಗುತ್ತಿದ್ದಳು. ಯುವತಿಯ ಈ ಕೆಲಸಕ್ಕೆ ಸಹಕರಿಸುತ್ತಿದ್ದ ಅಕ್ಕ, ಬಾವನನ್ನೂ ಪೋಲೀಸರು ಬಂಧಿಸಿದ್ದಾರೆ.
ಕೇರಳದ ಕೊಚ್ಚಿ ನಿವಾಸಿ ಲಾರೆನ್ ಜಸ್ಟಿನ್ ಎಂಬಾತ ಅಕ್ಟೋಬರ್'ನಲ್ಲಿ ತನ್ನ ಹೆಂಡತಿ ಮೇಘಾ ಬಾರ್ಗವ್ ಮದುವೆಯಾದ ಕೆಲವೇ ದಿನಗಳಲ್ಲಿ ಮನೆಯಲ್ಲಿದ್ದ 15ಲಕ್ಷ ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಬಗ್ಗೆ ದೂರು ನೀಡಿದ್ದ. ಆದರೆ ಪ್ರಕರಣದ ತನಿಖೆ ನಡೆಸಿದ ಕೇರಳ ಪೋಲೀಸರು ಶಾಕ್ ಆಗಿದ್ದರು, ಕೇರಳದಲ್ಲಿ ಆಕೆ ಈ ರೀತಿ ಮೊದಲೇ ಮೂವರಿಗೆ ವಂಚಿಸಿದ್ದಳು.
ಪ್ರಕರಣದ ಗಂಭೀರತೆ ಅರಿತ ಕೇರಳ ಪೋಲೀಸರು ತಕ್ಷಣ ಕಾರ್ಯಪ್ರವೃತರಾಗಿ ಮಾಹಿತಿ ಕಲೆಹಾಕಲು ಶುರುಮಾಡಿದರು ,ಆಕೆ ಅದಾಗಲೇ ಕೇರಳ, ಮುಂಬೈ, ಪುಣೆ, ರಾಜಸ್ತಾನ ಹಾಗೂ ಇಂದೋರ್'ಗಳಲ್ಲಿ ಇದೇ ರೀತಿ ಮದುವೆಯಾಗಿ ವಂಚಿಸಿದ ಮಾಹಿತಿ ಸಿಕ್ಕಿತ್ತು. ಬಹುತೇಕ ವಿಚ್ಚೇದಿತರು, ಅಂಗವಿಕಲರನ್ನೇ ಬಲೆಗೆ ಕೆಡವುತ್ತಿದ್ದ ಈಕೆ ಮದುವೆಯಾಗಿ ಕೆಲವೇ ದಿನಗಳಲ್ಲಿ ಮನೆಮಂದಿಗೆ ಅಮಲು ಪದಾರ್ಥ ನೀಡಿ ಮನೆಯನ್ನು ದೋಚಿ ಪರಾರಿಯಾಗುತ್ತಿದ್ದಳು.
ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೋಲೀಸರಿಗೆ ಆಕೆ ನೋಯ್ಡಾದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು, ತಕ್ಷಣ ಅಲ್ಲಿಗೆ ತೆರಳಿದ ಪೋಲೀಸರು ಆಕೆಯನ್ನು ಮತ್ತು ಆಕೆಗೆ ಸಹಕರಿಸುತ್ತಿದ್ದ ಅಕ್ಕ, ಭಾವನನ್ನು ನೋಯ್ಡಾದ ಅಮೃತಪಾಲ್ ಜೋಡಿಯಾಕ್ ಸೊಸೈಟಿಯ ಮನೆಯೊಂದರಿಂದ ಬಂಧಿಸಿದ್ದಾರೆ. ಇಲ್ಲೂ ಈಕೆ 12ನೇ ಗಂಡನ ಅನ್ವೇಷನೆಯಲ್ಲಿ ತೊಡಗಿದ್ದಳು ಎಂದು ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
No comments