Breaking News

ಶಬರಿಮಲೆ ದೇವಾಲಯದ ಅಪರೂಪದ ಹಳೆಯ ಫೋಟೋಗಳ ಗ್ಯಾಲರಿ.

ಕೇರಳ : ​​ಶಬರಿಮಲೆ ಕೇರಳದಲ್ಲಿರುವ ಹಿಂದೂಗಳ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.
ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದರೂ ಪ್ರತಿ ವರ್ಷ 30 ರಿಂದ 40 ಲಕ್ಷ ಯಾತ್ರಿಗಳು ಇಲ್ಲಿಗೆ ಭೇಟಿ ನೀಡಿ ಅಯ್ಯಪ್ಪನ ದಿವ್ಯದರ್ಶನ ಪಡೆಯುತ್ತಾರೆ.
ಶಬರಿಮಲೆ ದೇವಾಲಯ ಪರ್ವತಗಳಿಂದ ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಬಹುಶಃ ಕೇರಳದ ಅತ್ಯುತ್ತಮ ತೀರ್ಥಯಾತ್ರಾ ಸ್ಥಳವಾಗಿದೆ ಶಬರಿಮಲೆ. ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಜನವರಿ ಕೊನೆಯಾಗುತ್ತದೆ . ಶಬರಿಮಲೆ ದೇವಾಲಯ ಭಾರತದ ದಕ್ಷಿಣ ರಾಜ್ಯಗಳ ,ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದಲೂ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.
ಶಬರಿಮಲೆ ದೇವಾಲಯ ಹಾಗೂ ಯಾತ್ರಾರ್ಥಿಗಳ ಹಳೆಯ ಫೋಟೋಗಳು ನಿಮಗಾಗಿ












No comments