ಇಸ್ಲಾಮಿಕ್ ಧಾರ್ಮಿಕ ಶಿಕ್ಷಣದ ‘ಹಾಫಿಝಾ’ ಪದವಿ ಪಡೆದ ಖಾದರ್ ಪುತ್ರಿ
ಮಂಗಳೂರು : ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಅವರ ಪುತ್ರಿ ತನ್ನ ಹನ್ನೊಂದನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನನ್ನು ಸಂಪೂರ್ಣ ಕಂಠಪಾಠ ಮಾಡಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣದ ‘ಹಾಫಿಝಾ’ ಪದವಿ ಪಡೆದಿದ್ದಾಳೆ. ಅಂದಹಾಗೇ ಈಕೆಯ ಹೆಸರು ಹವ್ವಾ ನಸೀಮಾ. ಕಾಸರಗೋಡು ಅಡ್ಕರಬೈಲ್ ಮದ್ರಸತ್ತುಲ್ ಬಯಾನ್‌ನಲ್ಲಿ ಎರಡು ವರ್ಷಗಳ ಅಧ್ಯಯನ ಮಾಡಿದ ಹವ್ವಾ ಬಳಿಕ ಮಂಗಳೂರಿನ ಕೊಣಾಜೆ ಬಳಿ ಇರುವ ತನ್ ಫೀಝಲ್ ಕುರಾನ್ ಮಹಿಳಾ ಕಾಲೇಜಿನಲ್ಲಿ ಒಂದೂವರೆ ವರ್ಷಗಳ ಕಾಲ ಕುರಾನ್ ಅಧ್ಯಯನ ಮಾಡಿದಳು. ಈಕೆಗೆ ತಿರುವನಂತಪುರಂನ ಹಾಫಿಝ್ ಮುಹಮ್ಮದ್ ಝಿಯಾದ್ ನದ್ವಿ ನೇತೃತ್ವದಲ್ಲಿ ಅಲ್ ಹಾಫಿಝಾ ಸುಮಯ್ಯ ಧಾರ್ಮಿಕ ಶಿಕ್ಷಣ ಕಲಿಸಿದರು. ಇದೇ ಸಂಸ್ಥೆಯಲ್ಲಿ ಹವ್ವಾ ಜೊತೆಗೆ ಹತ್ತು ಮಂದಿ ಸಂಪೂರ್ಣ ಕುರಾನ್ ಕಂಠಪಾಠ ಮಾಡಿದ್ದಾರೆ. ಇವರ ಪೈಕಿ ಹವ್ವಾ ನಸೀಮಾ ಅವರಿಗೆ ಪದವಿ ಸಿಕ್ಕಿದೆ ಎಂದು ತಿಳಿದು ಬಂದಿದೆ .
source- sanjewani
No comments