Breaking News

ಕೋಮುಗಲಭೆಗೆ ಬೆಂಬಲಿಸಿದ್ದ ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಕಾಳಿಕೃಷ್ಣ ಆರು ತಿಂಗಳು ಅಮಾನತು.

ಕೊಪ್ಪಳ : ಕೊಪ್ಪಳದ ಗಂಗಾವತಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಕಾಳಿಕೃಷ್ಣರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಆರು ತಿಂಗಳ ಕಾಲ ಸೇವೆಯಿಂದ ಅಮಾನತು ಮಾಡಲಾಗಿದೆ.
ಬಳ್ಳಾರಿ ಐಜಿಪಿ ಮುರುಗನ್ ಅವರು ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಕಾಳಿಕೃಷ್ಣರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಧ್ವಜ ಕಟ್ಟುವ ವಿಚಾರಕ್ಕೆ ಭಾನುವಾರ ಶುರುವಾದ ಕೋಮುಗಲಭೆ ಇಡೀ ಗಂಗಾವತಿ ನಗರವನ್ನೇ ಬೆಚ್ಚಿಬೀಳಿಸಿತ್ತು, ಆದರೆ ಈ ಸಂದರ್ಭದಲ್ಲಿ ಎರಡೂ ಕೋಮಿನ ಜನರನ್ನು ನಿಯಂತ್ರಿಸಿ ಕ್ರಮ ತೆಗೆದುಕೊಳ್ಳಬೇಕಾಗಿದ್ದ ಸಿಪಿಐ ಕಾಳಿಕೃಷ್ಣ ಒಂದು ಕೋಮಿನ ಜನರೊಂದಿಗೆ ಕೂಡಿಕೊಂಡು ಕೊಮುಗಲಭೆ ಮತ್ತಷ್ಟು ಹೆಚ್ಚಲು ಕಾರಣವಾಗಿದ್ದರು.
ಇಷ್ಟೇ ಅಲ್ಲದೆ ಒಂದು ಕೋಮಿನ ಜನರು ಸಿಪಿಐ ಕಾಳಿಕೃಷ್ಣರನ್ನು ಹೆಗಲ ಮೇಲೆ ಎತ್ತಿ ಕುಣಿದು ಕೇಕೆ ಹಾಕಿ ಸಂಭ್ರಮಿಸಿದ್ದರು. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡಿದ ಕಾರಣ ಎಲ್ಲಾ ಕಡೆಯಿಂದ ಸಿಪಿಐ ಕಾಳಿಕೃಷ್ಣರನ್ನು ಅಮಾನತು ಮಾಡುವಂತೆ ಪ್ರತಿಭಟನೆಗಳು ನಡೆಯಿತು. ಹೀಗಾಗಿ ಬಳ್ಳಾರಿ ಐಜಿಪಿ ಮುರುಗನ್ ಅವರು ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಕಾಳಿಕೃಷ್ಣರನ್ನು ಆರು ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

No comments