ಮಂಗಳೂರು : ಉತ್ತರ ಭಾರತದ ಕೂಲಿ ಕಾರ್ಮಿಕರ ದರೋಡೆಗೈಯುತ್ತಿದ್ದ ಆರೋಪಿಗಳ ಬಂಧನ.
ಮಂಗಳೂರು : ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಬಡ ಕೂಲಿ ಕಾರ್ಮಿಕರನ್ನು ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪಣಂಬೂರು ಪೋಲೀಸರು ಆದಿತ್ಯವಾರ ಬಂಧಿಸಿದ್ದಾರೆ.
ಮಂಗಳೂರಿನ ಶಾಂತಿಗುಡ್ಡೆ ನಿವಾಸಿ ಮೊಹಮ್ಮದ್ ಮುಜಾಮ್ಬಿಲ್, ಹಳೆ ವಿಮಾನ ನಿಲ್ದಾಣ ರಸ್ತೆಯ ನಿವಾಸಿ ಶುಹುದ್ ಹಾಗೂ ಬಜ್ಪೆ ನಿವಾಸಿ ಕಮಲುದ್ದೀನ್ ಬಂಧಿತರು. ಆರೋಪಿಗಳು 19 ರಿಂದ 22 ವಯಸ್ಸಿನವರಾಗಿದ್ದು ಆದಿತ್ಯವಾರ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಕೋರ್ಟ್ ಆರೋಪಿಗಳಿಗೆ 15ದಿನಗಳ ನ್ಯಾಂಯಾಂಗ ಬಂಧನ ವಿಧಿಸಿದೆ.
ಆರೋಪಿಗಳು ಉತ್ತರ ಭಾರತದ ಕೂಲಿಕಾರ್ಮಿಕರನ್ನೆ ಗುರಿಯಾಗಿಸಿ ದರೋಡೆ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಅಸ್ಸಾಂನ ಕಮಲುದ್ದೀನ್ ಎಂಬಾತನಿಂದ ಆರೋಪಿಗಳು 32,000 ದರೋಡೆ ನಡೆಸಿದ್ದರು, ಆತ ಯಾರಿಗೂ ತಕ್ಷಣ ಮಾಹಿತಿ ಮುಟ್ಟಿಸದಂತೆ ಆರೋಪಿಗಳು ಆತನ ಮೊಬೈಲ್ ಧ್ವಂಸ ಮಾಡಿದ್ದರು.
ಶನಿವಾರ ಕೂಲಿಕಾರ್ಮಿಕರಿಗೆ ಸಂಬಳದ ದಿನವಾದ ಕಾರಣ ಆರೋಪಿಗಳು ಅಂದೇ ಹೆಚ್ಚಾಗಿ ದರೋಡೆಗೆ ಸ್ಕೆಚ್ ಹಾಕುತ್ತಿದ್ದರು. ಹಲವು ಬಾರಿ ಪ್ರಕರಣ ನಡೆದಿದ್ದರು ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರಲಿಲ್ಲ, ಆದರೆ ಕೆಲವರು ಈ ಬಾರಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪೋಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ, ಇನ್ನೂ ಇಬ್ಬರು ಆರೋಪಿಗಳ ಪತ್ತೆಗೆ ಪಣಂಬೂರು ಪೋಲೀಸರು ಬಲೆ ಬೀಸಿದ್ದಾರೆ.
No comments