'ನರೇಂದ್ರ ಮೋದಿ' ಅಪ್ಲಿಕೇಶನ್ ಹ್ಯಾಕ್ ಮಾಡಿದ ಮುಂಬೈ ಯುವಕ.
ಮುಂಬೈ : 22 ವರ್ಷದ ಸಾಫ್ಟ್'ವೇರ್ ಇಂಜಿನಿಯರ್ ಜಾವೇದ್ ಖಾತ್ರಿ, ತಾನು ಪ್ರಧಾನಿ ನರೇಂದ್ರ ಮೋದಿಯವರ 'ಮೋದಿ ಅಪ್ಲಿಕೇಶನ್' ಹ್ಯಾಕ್ ಮಾಡಿದ್ದೇನೆ ಎಂದು ಹೇಳಿದ್ದಾನೆ. ಅಪ್ಲಿಕೇಶನ್'ನಲ್ಲಿ ನೊಂದಣಿಯಾಗಿರುವ ಎಪ್ಪತ್ತು ಲಕ್ಷ ಜನರ ಖಾಸಗಿ ದಾಖಲೆಗಳಿಗೆ ಪ್ರವೇಶ ಮಾಡಬಹುದಿತ್ತು ಆದರೆ ತಾನು ಆ ಕೆಲಸ ಮಾಡಿಲ್ಲ ಎಂದಿದ್ದಾನೆ.
ನಾನು ಅಪ್ಲಿಕೇಶನ್'ನಲ್ಲಿರುವ ನೂನ್ಯತೆ ಎತ್ತಿತೋರಿಸಲು ಈ ಕೆಲಸ ಮಾಡಿದ್ದು ಜನಸಾಮಾನ್ಯರ ಖಾಸಗಿ ದಾಖಲೆಗಳು ಹ್ಯಾಕರ್'ಗಳ ಪಾಲಾಗಬಾರದು ಎಂಬುದು ತನ್ನ ಉದ್ದೇಶ ಎಂದಿದ್ದಾನೆ. ಜಾವೇದ್ ಮುಂಬೈಯ ಸಣ್ಣ ಸಾಫ್ಟ್'ವೇರ್ ಕಂಪನಿಯಲ್ಲಿ ಅಪ್ಲಿಕೇಶನ್ ಅಭಿವೃದ್ದಿಪಡಿಸುವ ಕೆಲಸ ಮಾಡುತ್ತಿದ್ದು ಗುರುವಾರ ತಾನು 'ಮೋದಿ ಅಪ್ಲಿಕೇಶನ್' ಹ್ಯಾಕ್ ಮಾಡಿದ್ದಾಗಿ ಹೇಳಿದ್ದಾನೆ
ಮೋದಿ ಅಪ್ಲಿಕೇಶನಲ್ಲಿ ಮುಖ್ಯವಾಗಿ ಅದರಲ್ಲಿ ನೋಂದಣಿಯಾದ ಜನರ ಇ-ಮೇಲ್ ಎಡ್ರಸ್ ಹಾಗೂ ದೂರವಾಣಿ ಸಂಖ್ಯೆಗಳು ಕ್ರೋಢೀಕೃತವಾಗಿರುತ್ತವೆ.
ಬಿಜೆಪಿ ಜಾವೇದ್ ನ ಮಾತನ್ನು ಅಲ್ಲಗಳೆದಿದ್ದು ಅಪ್ಲಿಕೇಶನ್ ಹ್ಯಾಕ್ ಆಗಿಲ್ಲ ಎಂದಿದೆ. ಅಪ್ಲಿಕೇಶನ್ ಹ್ಯಾಕ್ ಮಾಡಲಾಗಿದೆ ಎಂದು ವರದಿ ಪ್ರಕಟವಾದ ನಂತರ ಮಾದಯಮದೊಂದಿಗೆ ಮಾತನಾಡಿದ ಬಿಜೆಪಿಯ ಮಾಹಿತಿ ಹಾಗೂ ತಂತ್ರಜ್ಞಾನ ರಾಷ್ಟ್ರೀಯ ಸಂಚಾಲಕ ಅಮಿತ್ ಮಲ್ವಿಯ "ಈ ಅಪ್ಲಿಕೇಶನ್'ನಲ್ಲಿ ಜನರ ಯಾವುದೇ ಖಾಸಗಿ ದಾಖಲೆಗಳು ಇಲ್ಲ, ಜನರ ಮಾಹಿತಿಗಳನ್ನು ಗೂಢಲಿಪೀಕರಣದ ಮೂಲಕ ರಕ್ಷಿಸಿಡಲಾಗಿದೆ" ಎಂದರು.
ಜೊತೆಗ ಜಾವೇದ್ ಅವರು ಒಬ್ಬ ಅಪ್ಲಿಕೇಶನ್ ತಯಾರಕರಾಗಿ ಅದರ ಭದ್ರತೆಯ ಬಗ್ಗೆ ಗಮನ ಹರಿಸಿದ್ದಕ್ಕೆ ಧನ್ಯವಾದ ಹೇಳಿದರು. ನಾವು ಮೋದಿ ಅಪ್ಲಿಕೇಶನ್'ನ ಭದ್ರತೆ ಇನ್ನಷ್ಟು ಬಲಪಡಿಸುತ್ತೇವೆ ಎಂದರು.
No comments