ತಂದೆ ಸಂಸ್ಕಾರಕ್ಕೆ ಬರಲು NRIಗೆ ತುರ್ತು ವೀಸಾ ಕೊಡಿಸಿದ ಸುಷ್ಮಾ
ನವದೆಹಲಿ :ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಟ್ವೀಟರ್ ಮೂಲಕ ಸಹಾಯ ಅರಸಿ ಬಂದವರಿಗೆ ತಕ್ಷಣವೇ ಸ್ಪಂದಿಸುತ್ತಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಕಾರ್ಯವೈಖರಿಯನ್ನು ಮತ್ತೆ ಮುಂದುವರಿಸಿದ್ದಾರೆ.
ತುರ್ತು ವೀಸಾ ಬಯಸಿ ಚಿಕಾಗೋ ಭಾರತೀಯ ರಾಯಭಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಅನಿವಾಸಿ ಭಾರತೀಯ ರೋಹನ್ ಶಾ ಸಹಾಯ ಯಾಚಿಸಿ ಸುಷ್ಮಾಗೆ ಟ್ವೀಟ್ ಮಾಡಿದ್ದರು. ಟ್ವೀಟ್‌ಗೆ ಕ್ಷಣ ಮಾತ್ರದಲ್ಲಿ ಪ್ರತಿಕ್ರಿಯೆ ನೀಡಿದ ಸುಷ್ಮಾ, ಚಿಕಾಗೋ ರಾಯಭಾರ ಕಚೇರಿಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದರು. ನಂತರ ಗಂಟೆಯೊಳಗೆ ಶಾ ಅವರಿಗೆ ವೀಸಾ ಮಂಜೂರಾಗಿದ್ದನ್ನು ಟ್ವೀಟ್ ಮೂಲಕವೇ ಖಚಿತ ಪಡಿಸಿದರು.
Source vk
No comments