ಕರಾವಳಿ ಅಲೆ ನಿರ್ದೇಶಕರ ವಿರುದ್ಧ ಪಾಲೆಮಾರ್ ದಾಖಲಿಸಿದ್ದ ಮಾನನಷ್ಟ ಕೇಸು ವಜಾಗೊಳಿಸಿದ ಹೈಕೋರ್ಟ್
`ಕರಾವಳಿ ಅಲೆ’ ಪತ್ರಿಕೆಯನ್ನು ಪ್ರಕಟಿಸುತ್ತಿರುವ ಚಿತ್ರಾ ಪಬ್ಲಿಕೇಶನ್ಸ್ ಪ್ರೈ ಲಿಮಿಟೆಡ್ ಇದರ ಅಧ್ಯಕ್ಷರು ಮತ್ತು ನಿರ್ದೇಶಕರಾಗಿರುವ ಬಿ ವಿ ಸೀತಾರಾಂ ಹಾಗೂ ಆಡಳಿತ ನಿರ್ದೇಶಕಿ ರೋಹಿಣಿ ಸೀತಾರಾಂ ವಿರುದ್ಧ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕರಾವಳಿ ಅಲೆ’ ಪತ್ರಿಕೆಯಲ್ಲಿ ತಮ್ಮ ವಿರುದ್ಧ `ಸುಳ್ಳು ಹಾಗೂ ಮಾನಹಾನಿಕರ’ ಲೇಖನಗಳ ಸರಣಿಯನ್ನು ಆಗಸ್ಟ್ 2015 ಹಾಗೂ ಎಪ್ರಿಲ್ 2016ರ ನಡುವೆ ಪ್ರಕಟಿಸಲಾಗಿದೆ ಎಂದು ಪಾಲೆಮಾರ್ ಮಾಡಿರುವ ದೂರನ್ನು ಪರಿಗಣಿಸಿ ಮಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಅರ್ಜಿದಾರರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ತಮ್ಮ ವಿರುದ್ಧದ ಪ್ರಕರಣವನ್ನು ಕೈಬಿಡಬೇಕೆಂದು ಕೋರಿ ಸೀತಾರಾಂ ಹಾಗೂ ರೋಹಿಣಿ ಅವರು ಸಲ್ಲಿಸಿದ್ದ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಜಸ್ಟಿಸ್ ಆನಂದ್ ಬೈರಾರೆಡ್ಡಿ ಮೇಲಿನ ಆದೇಶ ನೀಡಿದ್ದಾರೆ.
`
No comments