ಎಂದಿರನ್ 2.0 ಚಿತ್ರೀಕರಣ ಸಂದರ್ಭದಲ್ಲಿ ರಜನೀಕಾಂತ್'ಗೆ ಗಾಯ.
ಚೆನ್ನೈ : ಎಂದಿರನ್ 2.0 ಸಿನಮಾದ ಚಿತ್ರೀಕರಣದ ಸಂದರ್ಭದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಗಾಯಗೊಂಡಿದ್ದಾರೆ. ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದು ರಜನೀಕಾಂತ್ ಎಡಗಾಲಿಗೆ ಗಾಯವಾಗಿದ್ದು ತಕ್ಷಣ ಅವರನ್ನು ಖಾಸಗೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ರಜನೀಕಾಂತ್'ರನ್ನು ನಿನ್ನೆ ಸಂಜೆ 8:45ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಕ್ಕೆ ಚಿಕಿತ್ಸೆ ಕೊಡಿಸಿ ಅರ್ಧಗಂಟೆಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು ಎಂದಿದ್ದಾರೆ.
ಅದೃಷ್ಟದಿಂದಾಗಿ 65 ವರ್ಷ ವಯಸ್ಸಿನ ರಜನೀಕಾಂತ್'ರಿಗೆ ಯಾವುದೇ ತರಹದ ದೊಡ್ಡ ಗಾಯಗಳು ಆಗಿಲ್ಲ, ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಕೆಲವೇ ಸಮಯದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಎಂದಿರನ್ 2.0 ಸಿನಿಮಾವನ್ನು ಎಸ್.ಶಂಕರ್ ನಿರ್ದೇಶನ ಮಾಡುತ್ತಿದ್ದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಅಮೀ ಜಾಕ್ಸನ್ ನಟಿಸುತ್ತಿದ್ದಾರೆ.
No comments