Breaking News

ನಿತಿನ್ ಗಡ್ಕರಿ ಮಗಳ ಮದುವೆಗೆ ಅತಿಥಿಗಳ ಕರೆತರಲು 50 ವಿಮಾನಗಳ ಬಳಕೆ.

ನಾಗ್ಪುರ : ಮಾಹಿತಿ ಪ್ರಕಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಗಳ ಮದುವೆಗೆ ಅತಿಥಿಗಳನ್ನು ಕರೆತರಲು 50ಕ್ಕೂ ಹೆಚ್ಚು ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ನಾಗ್ಪುರದಲ್ಲಿ ಆದಿತ್ಯವಾರ ನಡೆಯಲಿರುವ ಕೇಂದ್ರ ಸಚಿವ ಗಡ್ಕರಿ ಮಗಳ ಮದುವೆಯಲ್ಲಿ 10,000 ಕ್ಕೂ ಅಧಿಕ ಅತಿಥಿಗಳು ಭಾಗವಹಿಸಲಿದ್ದು, ಇವರನ್ನು ಕರೆತರಲು 50 ವಿಮಾನಗಳನ್ನು ಬಳಸಲಾಗುತ್ತಿದೆ. ಈ ಮದುವೆಯಲ್ಲಿ ವಿವಿಐಪಿ'ಗಳಾದ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಿಲಯನ್ಸ್ ಮಾಲಿಕ ಮುಖೇಶ್ ಅಂಬಾನಿ ಹಾಗೂ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಆಮಂತ್ರಿಸಲಾಗಿದೆ.

No comments