Breaking News

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ರಾಜೇಶ್ವರಿ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯಉಡುಪಿ : ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸ್ಥಾನದಲ್ಲಿ ಇರುವ ರಾಜೇಶ್ವರಿ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ .ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಅವರ ಕೊಲೆ ಪ್ರಕರಣದಲ್ಲಿ  ಅವರ ಪತ್ನಿ ರಾಜೇಶ್ವರಿ (50) ನ ಮಗ ಶರ್ಮ ಶೆಟ್ಟಿ (20), ಮತ್ತು ನಿರಂಜನ್ ಭಟ್ (26) ಮುಖ್ಯ  ಆರೋಪಿಗಳಾಗಿದ್ದಾರೆ.


ಭಾಸ್ಕರ್ ಶೆಟ್ಟಿ  ಅವರು ಜೂಲೈ ತಿಂಗಳ ಅಂತ್ಯದಲ್ಲಿ ಕಾಣೆಯಾಗಿದ್ದರು ,ನಂತರದ ಬೆಳವಣಿಗೆಯಲ್ಲಿ ಪೊಲೀಸ್ ತನಿಖೆಯಲ್ಲಿ ರಾಜೇಶ್ವರಿ ,ಅವಳ ಮಗ ಮತ್ತು ನಿರಂಜನ ಭಟ್ ಸೇರಿ ಭಾಸ್ಕರ್ ಶೆಟ್ಟಿ  ಅವರ ಕೊಲೆ ಮಾಡಿ ಶವನ್ನು ಹೋಮ ಕುಂಡದಲ್ಲಿ ದಹಿಸಿದ್ದರು ,ಇದೀಗ ಪ್ರಮುಖ ಆರೋಪಿಗಳು ಜೈಲಿನಲ್ಲಿ ಇದ್ದು ,ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ರಾಜೇಶ್ವರಿ ಅವರ ಜಾಮೀನು ಅರ್ಜಿಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ ,

No comments