ಸೆಕ್ಸ್ ಸಿಡಿ ಪ್ರಸಾರ ಬೇಡ, ಹೈಕೋರ್ಟ್ ಮೊರೆ ಹೋದ ಕಾಂಗ್ರೆಸ್ ಶಾಸಕ
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ ತಂದು ಇಟ್ಟ ಅಬಕಾರಿ ಮಾಜಿ ಸಚಿವ ಮೇಟಿ ರಾಸಲೀಲೆ ಪ್ರಕರಣ ಇತ್ತೀಚಿಗೆ ಮಾಧ್ಯಮದಲ್ಲಿ ಬಾರಿ ಸದ್ದು ಮಾಡಿತ್ತು ,ಆರ್.ಟಿ.ಐ ಕಾರ್ಯಕರ್ತ ರಾಜಶೇಖರ್ ಪದೇ ಪದೇ ಇನ್ನು ಮೂರು ಜನ ರಾಜಕಾರಣಿಗಳ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಹಲವು ಬಾರಿ ಮಾಧ್ಯಮದ ಮುಂದೆ ಹೇಳಿದ್ದು ಕಾಂಗ್ರೆಸ್ ಪಾಳಯದ ಮತ್ತೊಬ್ಬ ಶಾಸಕರಿಗೆ ನಡುಕ ಶುರುವಾಗಿದೆ.
ಕಾಂಗ್ರೆಸ್ ಪಕ್ಷದ ಬೀಳಗಿ ಶಾಸಕ ಜೆಟಿ(ಜಗದೀಶ್ ತಿಮ್ಮನಗೌಡ)ಪಾಟೀಲ್ ಇದೀಗ ತನಗೆ ಸಂಬಂಧಿಸಿದ ಯಾವುದೇ ಸೆಕ್ಸ್ ಸೀಡಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಜೆಟಿ ಪಾಟೀಲ್ ವಿರುದ್ಧದ ಯಾವುದೇ ಅಶ್ಲೀಲ ಸೀಡಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಿದೆ ಎಂದು ವರದಿ ವಿವರಿಸಿದೆ.
No comments