ಬಾಕ್ಸಿಂಗ್ ಗೆಲುವನ್ನು ಪಾಂಪೋರ್'ನಲ್ಲಿ ಹುತಾತ್ಮರಾದ ಯೋಧರಿಗೆ ಸಮರ್ಪಿಸಿದ ವಿಜೇಂದರ್ ಸಿಂಗ್.
ನವ ದೆಹಲಿ : ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಹಾಗೂ ತಾಂಜೇನಿಯದ ಫ್ರಾನ್ಸಿಸ್ ಚೆಕಾ ಮದ್ಯೆ ದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ವಿಜೇಂದರ್ ಸಿಂಗ್ ಜಯಶಾಲಿಯಾಗಿದ್ದಾರೆ.
ಪಂದ್ಯ ಆರಂಭಕ್ಕೆ ಮೊದಲು ನಡೆದ ಸುದ್ದಿಗೋಷ್ಟಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ತಾಂಜೇನಿಯಾ ಮೂಲದ 16ವರ್ಷಗಳ ವೃತ್ತಿಪರ ಅನುಭವಿ ಬಾಕ್ಸರ್ ಚೆಕಾ, ರಿಂಗ್ ನಲ್ಲೇ ವಿಜೇಂದರ್ ಸಿಂಗ್ ಅವರನ್ನು ಸಾಯಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಆದರೆ ವಿಜೇಂದರ್ ಸಿಂಗ್ ಪಂಚ್'ಗಳಿಗೆ ಸುಸ್ತಾದ ಚೆಕಾ ಮೂರನೇ ಸುತ್ತಿನ ಪ್ರಾರಂಭದಲ್ಲೇ ಪಂದ್ಯ ನಿಲ್ಲಿಸುವಂತೆ ರೆಫರಿಗೆ ಮನವಿ ಮಾಡುವುದರ ಮೂಲಕ ಪಂದ್ಯದಲ್ಲಿ ವಿಜೇಂದರ್ ಸಿಂಗ್ ವಿಜಯಶಾಲಿಯಾಗಿ ಹೊರಹೊಮ್ಮಿದರು. ಈ ಮೂಲಕ ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಸತತ 8ನೇ ಗೆಲುವಿನೊಂದಿಗೆ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಸೂಪರ್-ಮಿಡಲ್ವೇಟ್ ಚಾಂಪಿಯನ್ಷಿಪ್ ಬೆಲ್ಟ್ ಅನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜೇಂದರ್ ಸಿಂಗ್ ತಮ್ಮ ಈ ಗೆಲುವನ್ನು ಜಮ್ಮುಕಾಶ್ಮೀರದ ಪಾಂಪೋರ್'ನಲ್ಲಿ ಶನಿವಾರ ನಡೆದ ಉಗ್ರ ದಾಳಿಗೆ ಹುತಾತ್ಮರಾದ ಭಾರತೀಯ ಸೇನೆಯ ಯೊಧರಿಗೆ ಸಮರ್ಪಿಸಿದ್ದಾರೆ.
No comments