Breaking News

ಹಣ ತೆಗೆಯಲು ಬ್ಯಾಂಕಿಗೆ ಬಂದಿದ್ದ ಗರ್ಭಿಣಿಗೆ ಬ್ಯಾಂಕಿನಲ್ಲೇ ಹೆರಿಗೆ.

ಕಾನ್ಪುರ : ಬ್ಯಾಂಕಿನಲ್ಲಿ ಹಣ ತೆಗೆಯಲು ಸಾಲಿನಲ್ಲಿ ನಿಂತಿದ್ದ ಗರ್ಭಿಣಿಯೋರ್ವರಿಗೆ ಬ್ಯಾಂಕಿನಲ್ಲೇ ಮಗುವಿಗೆ ಜನ್ಮನೀಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ನಡೆದಿದೆ.
ತನ್ನ ಅತ್ತೆಯೊಂದಿಗೆ ಬ್ಯಾಕಿಗೆ ಹಣ ತೆಗೆಯಲು ಬಂದಿದ್ದ 30 ವರ್ಷದ 'ಸರ್ವೇಶ' ಶುಕ್ರವಾರ ಬ್ಯಾಂಕಿನ ಸಾಲಿನಲ್ಲಿ ನಿಂತಿದ್ದಳು. ಗುರುವಾರದಂದು ಹಣ ತೆಗೆಯಲು ಬ್ಯಾಂಕಿಗೆ ಬಂದಿದ್ದರೂ ತೆಗೆಯಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ಸಾಲಿನಲ್ಲಿ ನಿಂತಿದ್ದ ಅವಳಿಗೆ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಬ್ಯಾಂಕಿನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದವರು ಅಂಬ್ಯುಲೆನ್ಸ್ ಗೆ ಕರೆಮಾಡಿದರೂ ಅದು ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ಹಾಗಾಗಿ ಅವಳಿಗೆ ಸ್ಥಳದಲ್ಲಿದ್ದ ಮಹಿಳೆಯರ ಸಹಾಯದಿಂದ ಬ್ಯಾಂಕಿನಲ್ಲೇ ಹೆರಿಗೆ ಮಾಡಿಸಬೇಕಾಯಿತು.
ನಂತರ ಸ್ಥಳಕ್ಕೆ ಧಾವಿಸಿದ ಪೋಲೀಸರು, ಪೋಲೀಸ್ ವ್ಯಾನಿನಲ್ಲಿ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು. ಮೂಲಗಳ ಪ್ರಕಾರ 'ಸರ್ವೇಶ' ಗಂಡ ಇದೇ ವರ್ಷದ ಸಪ್ಟೆಂಬರ್'ನಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದು ಇದರ ಪರಿಹಾರ ಮೊತ್ತವನ್ನು ತೆಗೆಯಲು ಆಕೆ ಬ್ಯಾಂಕಿಗೆ ಬಂದಿದ್ದಳು ಎಂದು ತಿಳಿದು ಬಂದಿದೆ.

No comments