Breaking News

ಅನಂತಕುಮಾರ್ ಹೆಗಡೆಗೆ ಜಾಮೀನು



ಶಿರಸಿ :  ಟಿ ಎಸ್ ಎಸ್ ವೈದ್ಯರಿಗೆ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಸಂಸದ ಅನಂತ ಹೆಗಡೆ, ಬಿಜೆಪಿ ಮುಖಂಡ ಕೃಷ್ಣ ಎಸಳೆಗೆ ಗುರುವಾರ ಸಂಜೆ ಶಿರಸಿಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಎಫ್ ಐ ಆರ್ ಆಗಿ  2 ವಾರ ಪೊಲೀಸರು  ಸಂಸದರ ಪತ್ತೆ ವಿಳಂಬ ಮಾಡಿರುವದರಿಂದ ಅಂತಿಮವಾಗಿ ಇದೀಗ ಅವರು ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ

ಹೋದ ವಾರವೇ ಸಂಸದರ ಪರ ಅರ್ಜಿ ಕೋರ್ಟಿಗೆ ಬಂದರೂ ನಿರೀಕ್ಷಣಾ ಜಾಮೀನು ಸಿಕ್ಕಿರಲಿಲ್ಲ. ಅಂತೂ ಗುರುವಾರ ಮತ್ತೆ ಈ ವಿಷಯ ವಿಚಾರಣೆಗೆ ಬಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಸಂಜೆ ನಿರೀಕ್ಷಣಾ ಜಾಮೀನಿಗೆ ಆದೇಶ ಮಾಡಿದ್ದಾರೆ. ಆದೇಶ ಪ್ರತಿ ಬಂದ ಒಂದೆರಡು ದಿನಗಳಲ್ಲಿ ಸಂಸದರು ಶಿರಸಿಗೆ ಬರುವ ಸಾಧ್ಯತೆ ಇದೆ. ಇನ್ನು ಎರಡು ವಾರದೊಳಗೆ ಶಿರಸಿ ಜೆ ಎಂ ಎಫ್ ಸಿ ಕೋರ್ಟಿನಲ್ಲಿ ಖಾಯಂ ಜಾಮೀನು ಆದೇಶವನ್ನು ಸಂಸದರು ಪಡೆಯಬೇಕಾಗುತ್ತದೆ.
-karavali ale 
loading...

No comments