ಜಲ್ಲಿಕಟ್ಟು,ನಿಷೇದಿಸಿದರೆ ದನದ ಮಾಂಸೋದ್ಯಮವನ್ನೂ ನಿಷೇಧಿಸಲಿ : ಪವನ್ ಕಲ್ಯಾಣ್
ಅಮರಾವತಿ. : ಒಂದು ವೇಳೆ ಸುಪ್ರೀಂ ಕೋರ್ಟ್ ಈ ಆಚರಣೆಗಳನ್ನು ನಿಷೇಧಿಸಲೇಬೆಕೆಂದು ತೀರ್ಮಾನಿಸುವುದಾದರೆ ಮಾಂಸೋದ್ಯಮದ ಮೇಲೂ ನಿಷೇಧ ಹೇರಲಿ’ ಎಂದು ನಟ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಮಿಳುನಾಡಿನ ಸಾಂಪ್ರದಾಯಿಕ ಸ್ಪರ್ಧೆ ಜಲ್ಲಿಕಟ್ಟು ಮತ್ತು ಕೋಳಿ ಕಾಳಗದ ಮೇಲೆ ದಕ್ಷಿಣ ಭಾರತದಲ್ಲಿ ನಿಷೇಧ ಹೇರಿರುವುದು ದ್ರಾವಿಡ ಸಂಸ್ಕೃತಿ ಹಾಗೂ ದ್ರಾವಿಡ ಪ್ರಾದೇಶಿಕತೆಯ ಮೇಲೆ ಮಾಡುತ್ತಿರುವ ಆಕ್ರಮಣದಂತೆ ಕಾಣುತ್ತದೆ’ ಎಂದು ಹೇಳುವ ಮೂಲಕ ನಟ ಪವನ್ ಕಲ್ಯಾಣ್ ಜಲ್ಲಿಕಟ್ಟಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ‘ಸುಪ್ರೀಂಕೋರ್ಟ್ ಪ್ರಾಣಿ ಹಿಂಸೆಯ ಮಾನದಂಡವನ್ನು ಆಧಾರವಾಗಿರಿಸಿಕೊಂಡು ನಮ್ಮ ಆಚರಣೆಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಬಂದಿರುವುದಾದರೆ, ನಮ್ಮ ದೇಶದಿಂದ ರಫ್ತಾಗುತ್ತಿರುವ ದನದ ಮಾಂಸದ ಪ್ರಮಾಣ ಹಾಗೂ ಕೋಳಿ ಉದ್ಯಮದ ಅಂಕಿ-ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯವಿದೆ’ ಎಂದು ಆಗ್ರಹಿಸಿದರು.
Via ee sanje
loading...
No comments