Breaking News

ಝಾಕಿರ್‌ ನಾಯ್ಕ್‌ಗೆ ಮತ್ತೆ ಕಂಟಕ


ನವದೆಹಲಿ : ವಿವಾದಿತ ಧರ್ಮ ಪ್ರಚಾರಕ ಎಂದೇ ಖ್ಯಾತರಾಗಿರುವ ಝಾಕೀರ್‌ ನಾಯ್ಕ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣಾ ಕಾಯಿದೆಯಡಿ ಸಮನ್ಸ್‌ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ 
ಝಾಕಿರ್‌ ನಾಯ್ಕ್‌ ನಡೆಸುತ್ತಿದ್ದ (ಐಆರ್‌ಎಫ್‌) 100 ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳವನ್ನು ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ತೊಡಗಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿತ್ತು.
ಕೆಲವು ಬ್ಯಾಂಕುಗಳು ಈಗಾಗಲೇ ಝಾಕೀರ್‌ ವಹಿವಾಟಿನ ವಿವರಗಳನ್ನು ಈಗಾಗಲೇ ಎನ್‌ಐಎಗೆ ನೀಡಿವೆ. ಇನ್ನು ಕೆಲವು ಬ್ಯಾಂಕುಗಳು ಶೀಘ್ರವೇ ಮಾಹಿತಿ ನೀಡಲಿವೆ. ಈ ಎಲ್ಲಾ ವಹಿವಾಟಿನ ಕುರಿತು ಎನ್‌ಐಎ ಝಾಕಿರ್‌ ನಾಯಕ್‌ರ ವಿಚಾರಣೆಗೆ ಬರುವಂತೆ ಕೇಳಿಕೊಂಡಿತ್ತು. ಇದನ್ನು ನಿರಾಕರಿಸಿದ್ದ ಝಾಕಿರ್‌ಗೆ ಅಕ್ರಮ ಹಣ ವರ್ಗಾವಣಾ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಕೋರಿತ್ತು.


loading...

No comments