ಎತ್ತಿನಹೊಳೆ ಸರ್ಜಿಕಲ್ ಸ್ಟ್ರೈಕ್ ಮುಂದಕ್ಕೆ ಹಾಕಿದ ನಳೀನ್
ಮಂಗಳೂರು : ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆ ವಿರುದ್ಧ ಜ 26ರ ಬಳಿಕ ಉಗ್ರ ಸ್ವರೂಪದ ಸರ್ಜಿಕಲ್ ಸ್ಟ್ರೈಕ್ ಮಾದರಿಯ ಹೋರಾಟ ಆರಂಭಿಸುವುದಾಗಿ ಹೇಳಿದ್ದ ಎತ್ತಿನಹೊಳೆ ಯೋಜನಾ ವಿರೋಧಿ ಹೋರಾಟಗಾರರು ಸಭೆ ಸೇರಿ ಸರ್ಜಿಕಲ್ ಸ್ಟ್ರೈಕನ್ನು ಕೈಬಿಟ್ಟು ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಗುರುವಾರ ಪುರಭವನದ ಬಳಿ ಸಭೆ ಸೇರಿದ್ದ ಹೋರಾಟಗಾರರು, ಮೊದಲಿಗೆ ಪುರಭವನದ ಮುಂಭಾಗದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಹಿಂಸಾತತ್ವದಡಿ ಹೋರಾಟ ಮಾಡಲು ನಿರ್ಧರಿಸಿದರು. ಪ್ರಸ್ತುತ ಕರಾವಳಿಯಲ್ಲಿ ಕಂಬಳ ಹೋರಾಟದ ಕಾವು ಜೋರಾಗಿರುವುದರಿಂದ ಎತ್ತಿನಹೊಳೆ ಯೋಜನೆಯನ್ನು ಜನ ಬೆಂಬಲಿಸುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಹೋರಾಟಗಾರರು ಪ್ರತಿಭಟನೆಯನ್ನು ಮುಂದಕ್ಕೆ ಹಾಕಿದ್ದಾರೆ ಎನ್ನಲಾಗಿದೆ
ಸಂಸದ ನಳಿನ್ ಕುಮಾರ್ ಕಟೀಲ್, ಪಾಲೇಮಾರ್, ವಿಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸರ್ಜಿಕಲ್ ಸ್ಟ್ರೈಕ್ ರೀತಿಯ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ
loading...
No comments