Breaking News

ಕಂಬಳದ ಕೋಣಗಳಿಗೆ ತಳಿ ಗೌರವ ನೀಡಲು ಸರಕಾರ ಚಿಂತನೆ ?



ಬೆಂಗಳೂರು : ದಕ್ಷಿಣದ ಕಂಬಳದ ಕ್ರೀಡೆಗಳಲ್ಲಿ ಭಾಗವಹಿಸುವ ಕೋಣಗಳಿಗೆ ತಳಿ ಗೌರವ ನೀಡಲು ಕಳೆದ ವರ್ಷ ಒಮ್ಮೆ ಪ್ರಯತ್ನಿಸಿದ್ದ ರಾಜ್ಯ ಸರಕಾರ ಇದೀಗ ಈ ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನ ನಡೆಸಲಿದ್ದು, ನ್ಯಾಷನಲ್ ಬ್ಯುರೋ ಆಫ್ ಅನಿಮಲ್ ಜೆನೆಟಿಕ್ಸ್ ಸಂಸ್ಥೆಗೆ ಮನವಿ ಮಾಡಲಿದೆ. ಸರಕಾರದ ಪ್ರಯತ್ನ ಸಫಲಗೊಂಡಿದ್ದೇ ಆದಲ್ಲಿ ಕೋಣಗಳ ಬಗೆಗಿನ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಕೇಂದ್ರದಿಂದ ಧನಸಹಾಯ ಒದಗಿ ಬರಲಿದೆ.

“ದಕ್ಷಿಣ ಕನ್ನಡದಲ್ಲಿ ಕೋಣಗಳ ಜೆನೆಟಿಕ್ಸ್ ಬಗ್ಗೆ ನಡೆಸಲಾದ ಕೆಲವೊಂದು ಅಧ್ಯಯನಗಳ ವಿವರಗಳನ್ನೊಳಗೊಂಡಂತೆ ಈ ಹಿಂದೆ ಮನವಿ ಸಲ್ಲಿಸಿದ್ದಾಗ ಬ್ಯೂರೋ ಕೇಳಿದ್ದ ಕೆಲವೊಂದು ಮಾಹಿತಿಗಳ ಹೊಸ ದಾಖಲೆಗಳನ್ನು ಸಲ್ಲಿಸಲಾಗುವುದು. ಈ ಪ್ರಕ್ರಿಯೆ ಮುಂದಿನ ಕೆಲ ತಿಂಗಳಲ್ಲಿ ಪೂರ್ಣಗೊಳ್ಳಲಿದೆ” ಎಂದು ಬೆಂಗಳೂರಿನ ನ್ಯಾಷನಲ್ ಡೈರಿ ರಿಸರ್ಚ್ ಇನಸ್ಟಿಟ್ಯೂಟ್ ನಿರ್ದೇಶಕರಾದ ಕೆ ಪಿ ರಮೇಶ್ ಹೇಳಿದ್ದಾರೆ.

ದಕ್ಷಿಣ ಕನ್ನಡದ ಹಾಗೂ ಧಾರವಾಡದ ಕೋಣಗಳಿಗೆ ತಳಿ ಗೌರವ  ಪಡೆಯುವ ಸಲುವಾಗಿ ಡೈರಿ ರಿಸರ್ಚ್ ಇನಸ್ಟಿಟ್ಯೂಟ್ ಕಳೆದ ವರ್ಷದಿಂದ ಪ್ರಯತ್ನಿಸುತ್ತಿದೆ. ಮಲ್ನಾಡ್ ಗಿಡ್ಡ ಎಂಬ ಗೋ ತಳಿಗೆ, ತಳಿ ಗೌರವವನ್ನು 2011ರಲ್ಲಿ ಪಡೆಯುವಲ್ಲಿಯೂ ರಮೇಶ್ ಅವರ ಪ್ರಯತ್ನಗಳಿದ್ದವು. ಒಡಿಶಾದ ಚಿಲಿಕ ಕೋಣಗಳೂ ತಳಿ ಗೌರವ  ಪಡೆದಿವೆಯೆಂದು ಅವರು ನೆನಪಿಸಿದ್ದಾರೆ.

ಕೋಣಗಳಿಗೆ ಬೇಡಿಕೆ

ದಕ್ಷಿಣ ಕನ್ನಡ ಹಾಗೂ ಉಡುಪಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದಿಂದಾಗಿ ಕೋಣಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಕೋಣಗಳ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸವಾಗಿದೆ ಎನ್ನುತ್ತಾರೆ ನ್ಯಾಷನಲ್ ಡೈರಿ ರಿಸರ್ಚ್ ಇನಸ್ಟಿಟ್ಯೂಟ್ ನಿರ್ದೇಶಕ ಕೆ ಪಿ ರಮೇಶ್. ಎಮ್ಮೆಗಳು ನೀಡುವ ಹಾಲಿನ ಪ್ರಮಾಣವೂ ಕಡಿಮೆಯಾಗಿರುವುದರಿಂದ (ದಿನಕ್ಕೆ ಒಂದರಿಂದ ಐದು ಲೀಟರ್) ಅವುಗಳನ್ನು ಸಲಹಲು ರೈತರು ಆಸಕ್ತಿ ವಹಿಸುತ್ತಿಲ್ಲ ಎಂದು ಅವರು ವಿವರಿಸುತ್ತಾರೆ.
-via karavali ale 
loading...

No comments