ನೋಟುಗಳಲ್ಲಿ ಗಾಂಧಿಜೀ ಪೊಟೊ ಕಾಣಿಸಿಕೊಂಡದರಿಂದ ನೋಟಿನ ಮೌಲ್ಯ ಕುಸಿದಿದೆ ಬಿಜೆಪಿ ಸಚಿವರ ವಿವಾದಾತ್ಮಕ ಹೇಳಿಕೆ
ಮಹಾತ್ಮ ಗಾಂಧೀಜಿಗಿಂತ ಪ್ರಧಾನಿ ನರೇಂದ್ರ ಮೋದಿ ಆ ಕ್ಯಾಲೆಂಡರ್ ಗೆ ಸೂಕ್ತ ವ್ಯಕ್ತಿ ಅನ್ನುವ ಮೂಲಕ ಹೊಸ ವಿವಾದಾ ತನ್ನ ಮೇಲೆ ಎಳೆದಕೊಂಡಿದ್ದಾರೆ .
ಕ್ಯಾಲೆಂಡರ್ ನಲ್ಲಿ ಮಹಾತ್ಮ ಗಾಂಧಿ ಫೋಟೋ ಇರುವ ಜಾಗದಲ್ಲಿ ಮೋದಿ ಪೋಟೋ ಹಾಕಿರುವುದು ಒಳ್ಳೆಯ ಬೆಳವಣಿಗೆ
ಗಾಂಧೀಜಿ ಹೆಸರಿಗಿಂತ ಮೋದಿ ಹೆಸರು ಹೆಚ್ಚು ಪ್ರಸಿದ್ದಿ ಪಡೆದಿದೆ.
ಹಾಗೂ ಖಾದಿಯಲ್ಲಿ ಗಾಂಧೀಜಿ ಹೆಸರನ್ನು ಸೇರಿಸಿದಾಗಿನಿಂದಲೂ ಖಾದಿ ಗ್ರಾಮೋದ್ಯಮ ಅಭಿವೃದ್ಧಿಯಾಗಿಲ್ಲ ಎಂದು ಹರ್ಯಾಣದ ಆರೋಗ್ಯ ಉಸ್ತುವಾರಿ, ಕ್ರೀಡಾ ಸಚಿವ ಅನಿಲ್ ವಿಜ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು
ಇಷ್ಟಕ್ಕೆ ಸುಮ್ಮನಾಗದ ಅವರು ನೋಟುಗಳಲ್ಲಿ ಗಾಂಧೀಜಿ ಫೋಟೋ ಕಾಣಿಸಿಕೊಂಡಾಗಿನಿಂದ ನೋಟಿನ ಮೌಲ್ಯ ತಿರ ಕೆಳಮಟ್ಟಕ್ಕೆ ಸಾಗಿದೆ ಎಂದು ಹೇಳಿದ್ದಾರೆ.
ಅನಿಲ್ ವಿಜ್ ವಿವಾದಾತ್ಮಕ ಹೇಳಿಕೆಯಿಂದ ತೀವ್ರ ಮುಖಭಂಗಕ್ಕೆ ಒಳಗಾದ ಬಿಜೆಪಿ ಇದರಿಂದ ಅಂತರ ಕಾಯ್ದುಕೊಂಡಿದೆ.
ಇದು ಅನಿಲ್ ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಭದವಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ವಿವಾದ ತೀವ್ರತೆ ಅರಿತ ಸಚಿವ ಅನಿಲ್ ವಿಜ್ ಅದಕ್ಕೆ ತೆಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದು
ಮಹಾತ್ಮ ಗಾಂಧಿಯವರ ಬಗ್ಗೆ ನೀಡಿರುವ ಹೇಳಿಕೆ ಅದು ನನ್ನ ವೈಯಕ್ತಿಕ ಅಭಿಪ್ರಾಯ. ಯಾರೊಬ್ಬರ ಭಾವನೆಗಳಿಗೂ ಧಕ್ಕೆಯಾದರೆ ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಅನಿಲ್ ವಿಜ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
loading...
No comments