Breaking News

ಯೋದರ ಮೊಬೈಲ್ ಬಳಕೆ ವಿರುದ್ಧ ಕೇಂದ್ರ ಕೆಂಗಣ್ಣುನವದೆಹಲಿ:ದಿನದಿಂದ ದಿನಕ್ಕೆ ಸೇನೆಯ ನಾನಾ ವಿಭಾಗಳಿಂದ ತಮಗಾಗುವ ನೋವನ್ನು ಸಾಮಾಜಿಕ ಜಾಲತಾಣದ ಮುಖೇನಾ ವ್ಯಕ್ತ ಪಡಿಸುತ್ತಾ ಇರುವ ಯೋಧರಿಗೆ ಮೂಗುಧಾರ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಮೊನ್ನೆ ಬಿಎಸ್ ಎಪ್ ಯೋಧ ತನಗಾಗುವ ನೋವನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ವೀಡಿಯೋ ರೂಪದಲ್ಲಿ ಹಾಕಿ ತಮಗೆ ಸಿಗುವ ಆಹಾರದ ಬಗ್ಗೆಯೂ ಸರಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿದರು ಆ ಯೋಧ ಹಾಕಿದ ವೀಡಿಯೋ ಇಡೀ ದೇಶದಾದ್ಯಂತ ಬಾರಿ ಸಂಚಲನ ಮೂಡಿಸಿದ್ದು ಮಾತು ಎತ್ತಿದ್ದರೆ ಮೇರೆ ಜವಾನೊ ಅನ್ನುವ ಮೋದಿ ಸರಕಾರಕ್ಕೆ ಆ ವಿಡಿಯೋ ಇರುಸು ಮುರುಸು ತಂದು ಇಟ್ಟಿದೆ .

ಇದೀಗ ತನ್ನ ಮುಜುಗರಕ್ಕೆ ತೆಪೆ ಹಚ್ಚಲು ಮುಂದಾಗಿದ್ದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರಂತೆ ಹಾಗಾಯಿತ್ತು ಇವರ ಪರಿಸ್ಥಿತಿ.
ದಿನದ ಇಪ್ಪತ್ನಾಲ್ಕು ಗಂಟೆ  ದೇಶದ ಗಡಿಕಾಯುವ ಯೋಧನಿಗೆ ಸರಿಯಾದ ಆಹಾರ ಕೊಡಲು ಸಾದ್ಯವಿಲ್ಲದ ಸರಕಾರ ಬುಲೆಟ್ ಟ್ರೈನ್ ತರಲು ಹೊರಟಿರುವುದು ವಿಪರ್ಯಾಸ ಅಂತ ವಿಪಕ್ಷಗಳು ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ .

ಯೋಧರ ಮನಕಲಕುವ ವೀಡಿಯೋಗಳು ಒಂದಾದ ಮೇಲೆ ಒಂದು ಬರತ್ತಾ ಇದ್ದು ಸರಕಾರಕ್ಕೆ ಬಾರಿ ಮುಜುಗರ ಉಂಟು ಮಾಡಿದೆ ಹಾಗಾಗಿ ಇನ್ನೂ ಮುಂದೆ ಸೈನಿಕರು ಯಾವುದೇ ಕಾರಣಕ್ಕೂ ಸ್ಮಾರ್ಟ್ ಪೋನ್ ಬಳಸುವಂತಿಲ್ಲ ಅಂತ ಗ್ರಹಮಂತ್ರಿ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.


ಮಾಧ್ಯಮವೊಂದರ ಪ್ರಕಾರ, ಶನಿವಾರ ಹೊರಡಿಸಲಾದ ಮತ್ತೊಂದು ಆದೇಶದಂತೆ ಸೇನೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಅದರಂತೆ ಸೈನಿಕರು ತಮ್ಮ ಬಳಿ ಸ್ಮಾರ್ಟ್ ಫೋನ್ ಇರಿಸಿಕೊಳ್ಳಲು ಸಾಧ್ಯವಿಲ್ಲ, ಬದಲಾಗಿ ಸಾಮಾನ್ಯ ಬೇಸಿಕ್ ಫೋನ್‌ಗಳನ್ನು ಮಾತ್ರವೇ ಇರಿಸಿಕೊಳ್ಳಬಹುದಾಗಿದೆ.

ಮತ್ತೊಂದೆಡೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೈನಿಕರು ನೀಡಿದ ಯಾವುದೇ ದೂರುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ದೂರುಗಳನ್ನು ಪೋಸ್ಟ್ ಮಾಡದಂತೆ ಮನವಿ ಅವರು ಮಾಡಿದ್ದಾರೆ.

ಏನೇ ಆಗಲಿ ಸೈನಿಕರು ತಮಗಾದ ನೋವನ್ನು ಹಿರಿಯ ಅಧಿಕಾರಿಗಳು ಆಲಿಸದಿದ್ದಾಗ ಅದನ್ನು ಕೊನೆಯ ಭರವಸೆ ಸದ್ಯದ ಸಾಮಾಜಿಕ ಜಾಲತಾಣಲ್ಲಿ ಹಾಕಿದ್ದು ತಪ್ಪೇ ಹಾಗಾದರೆ ಸರಕಾರಕ್ಕೆ ಯೋಧರ ಕ್ಷೇಮಕ್ಕಿಂತ ಸರಕಾರದ ಮರ್ಯಾದೆ ಮುಖ್ಯವಾಯಿತ್ತೆ ? ಇದಕ್ಕೆ ಅಮಾಯಕ ಯೋದರ ಬಲಿ ಪಡೆಯಲು ಆಸೇಯೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಾ ಇದೆ.
loading...

No comments