ಕಮ್ಮನ ಹಳ್ಳಿ ಕಾಮುಕ ಪಿಶಾಚಿಗಳ ಬಂಧನ
ಸುದ್ದಿ24×7 ಬೆಂಗಳೂರು: ಕಮ್ಮನಹಳ್ಳಿಯಲ್ಲಿ ಜನವರಿ 1ರಂದು ತಡರಾತ್ರಿ ಯುವತಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪಟ್ಟ ನಾಲ್ವರನ್ನು ನಗರ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.
ರಾಷ್ಟ್ರ ವ್ಯಾಪಿ ಬಹಳ ಸಂಚಲನ ಮೂಡಿಸಿದ ಈ ಪ್ರಕರಣ ಇದೀಗ ಆರೋಪಿಗಳ ಬಂಧನದ ಮುಖೇನಾ ಸುಖಾಂತ್ಯ ಕಂಡಿದೆ .
ಬಂಧಿತ ಆರೋಪಿಗಳು ಬಿ.ಕಾಂ ವಿದ್ಯಾರ್ಥಿ ಲೆನೊ, ಟಾಟಾ ಏಸ್ ಚಾಲಕ ಅಯ್ಯಪ್ಪ, ಸೋಮಶೇಖರ್ ಅಲಿಯಾಸ್ ಚೆನ್ನಿ, ಸುದೇಶ್ ಎಂದು ಗುರುತಿಸಲಾಗಿದೆ ಇದರಲ್ಲಿ ವಿದ್ಯಾರ್ಥಿ ಲೆನೊ ಗಾಂಜಾ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ
ಬಂಧಿತ ಆರೋಪಿಗಳಿಂದ ಸ್ಫೋಟಕ ಮಾಹಿತಿ ಲಭಿಸಿದ್ದು ಕಳೆದ ಒಂದು ವಾರದಿಂದ ಈ ಕೃತ್ಯ ನಡೆಸಲು ತಯಾರಿ ನಡೆಸಿದ್ದು ಆಕೆಯನ್ನು ಅತ್ಯಚಾರ ಮಾಡಿ ಕೊಲೆ ಮಾಡುವ ಸಂಚು ರೂಪಿಸಲಾಗಿದ್ದು ಎಂದು ತಿಳಿದು ಬಂದಿದೆ .
ಬಂಧನ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್‌್ ಪ್ರವೀಣ್ ಸೂದ್, ‘ಪ್ರಕರಣ ಸಂಬಂಧ ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆ ತಂಡ ನಾಲ್ವರನ್ನು ಬಂಧಿಸಿದೆ. ಈ ನಾಲ್ವರು ಆನ್‌ಲೈನ್ ಫುಡ್ ಡೆಲಿವರಿ ಬಾಯ್‌ಗಳಾಗಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು’ ಎಂದು ಹೇಳಿದರು.
ರಾಮಮೂರ್ತಿನಗರ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಸಿದ ಹೇಮಂತ ನಿಂಬಾಳ್ಕರ್ ಹಾಗೂ ಅಧಿಕಾರಿಗಳು, ಸಂಜೆ ವೇಳೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದರು. ಕೆಲವೇ ಹೊತ್ತಿನಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
Source prajavani
No comments