ಕಮ್ಮನಹಳ್ಳಿ ಯುವತಿಯ ಮೇಲೆ ದೌರ್ಜನ್ಯ ಎಸಗಿದ ಆರೋಪಿ ಹೇಳಿದ್ದೇನು ?
ಆರೋಪಿ ಅಯ್ಯಪ್ಪ ಸ್ವಇಚ್ಛಾ ಹೇಳಿಕೆ
“ನನ್ನ ಹೆಸರು ಅಯ್ಯಪ್ಪ. ಬಾಣಸವಾಡಿಯಲ್ಲಿ ವಾಸ ಮಾಡೋ ನಾನು ಟಾಟಾ ಏಸ್ ಗಾಡಿಯ ಚಾಲಕನಾಗಿ ಕೆಲ್ಸಾ ಮಾಡ್ತಿದ್ದೆ. ಒಂದು ವರ್ಷದ ಹಿಂದೆ ಬಾಡಿಗೆಗೆ ಆಟೋ ಓಡಿಸಿಕೊಂಡಿದ್ದ ನನಗೆ ನನ್ನದೇ ಸ್ವಂತ ಆಟೋ ಖರೀದಿ ಮಾಡುವ ಆಸೆ ಇತ್ತು. ಅದಕ್ಕಾಗಿ ನಾನು ಸ್ವಲ್ಪ ಪ್ರಮಾಣದಲ್ಲಿ ಸಾಲ ಮಾಡಿಕೊಂಡು ಆಟೋ ಖರೀದಿಗೆ ಮುಂದಾಗಿದ್ದೆ. ಹೀಗೆ ಟಾಟಾ ಏಸ್ ಓಡಿಸ್ತಾ ಇದ್ದಾಗ ನನಗೆ ಸುಲ್ತಾನ್ ಬಾಯ್ ಅವರು ಕೊರಿಯರ್ ಮಾಲ್‍ಗಳನ್ನು ತರೋದಕ್ಕೆ ಹೇಳ್ತಾ ಇದ್ರು. ಭಾಯ್ ಹೇಳಿದ ಕೊರಿಯರ್‍ಗಳು, ಮಾಲುಗಳನ್ನು ತಂದುಕೊಡುವುದಷ್ಟೇ ನನ್ನ ಕೆಲ್ಸ ಆಗಿತ್ತು. ಟಾಟಾ ಏಸ್‍ನಲ್ಲಿ ತರುತ್ತಿದ್ದ ಮಾಲುಗಳನ್ನು ಸುಲ್ತಾನ್ ಭಾಯ್ ಅವರಿಗೆ ಡೆಲಿವರಿ ಕೊಡ್ತಿದ್ದೆ. ನನಗೆ ಅಲ್ಲಿ ಲೆನೋ ಪರಿಚಯವಾಯಿತು.
ಲೆನೋ ಕೂಡ ಕೊರಿಯರ್ ಡಿಸ್ಟ್ರಿಬ್ಯೂಟ್ ಮಾಡಿಕೊಂಡಿದ್ದ. ನಾನು ಲೆನೋ, ಜೇಮ್ಸ್ ಎಲ್ಲರದ್ದೂ ಒಂದೇ ಅಡ್ಡ ಆಗಿತ್ತು. ಏಳನೇ ರಸ್ತೆಯ ಕಾರ್ನರ್‍ನಲ್ಲಿ ಇರುವ ಸಲೂನ್ ಬಳಿ ಅಡ್ಡ ಮಾಡಿಕೊಂಡಿದ್ದ ನಮಗೆ ಯಾವಾಗ್ಲೂ ಆ ಹುಡುಗಿ ಸಿಕ್ತಾ ಇದ್ಲು. ಕಣ್ಣಿಗೆ ಕಾಣಿಸ್ತಾ ಇದ್ದ ಹುಡುಗಿ ನಮ್ಮ ರಾಜ್ಯದವಳು ಅಲ್ಲ ಅನ್ನೋದು ಗೊತ್ತಾಗಿತ್ತು. ಲೆನೊ ಒಮ್ಮೊಮ್ಮೆ ಹುಚ್ಚನ ರೀತಿ ಅವಳಿಗೆ ಪ್ರಪೋಸ್ ಮಾಡ್ತೀನಿ ಅಂತೆಲ್ಲಾ ಹೇಳ್ತಿದ್ದ. ಆದ್ರೆ ನಮ್ಮ ಹುಡುಗ್ರು ಅವಳನ್ನ ಬೇರೆ ಅರ್ಥದಲ್ಲಿಯೇ ಹೇಳ್ತಿದ್ರು. ಅವಳನ್ನು ಮಾತನಾಡಿಸ್ಬೇಕು ಅಂದುಕೊಳ್ಳುತ್ತಾ ಇದ್ದ ನಮಗೆ ಅದು ಸಾಧ್ಯ ಆಗ್ತಿರ್ಲಿಲ್ಲ. ಅವತ್ತು ಡಿಸೆಂಬರ್ 31ರ ರಾತ್ರಿ ನಾವು ಸಖತ್ ಆಗಿಯೇ ಪಾರ್ಟಿ ಮಾಡಿದ್ವಿ. ಪಪ್ಪಿ ಪಾರ್ಟಿ ಮುಗಿದ ಬಳಿಕ ರೌಂಡ್ಸ್ ಹೋಗೋಣ ಅಂತ ಹೇಳಿದ್ದ. ಹೀಗೆ ರೌಂಡ್ಸ್ ಮಾಡೋವಾಗ ಅಚಾನಕ್ ಆಗಿ ಆ ಹುಡಗಿಯರಿಬ್ಬರು ಆಟೋದಲ್ಲಿ ಬರೋದು ಕಣ್ಣಿಗೆ ಬಿತ್ತು. ಲೆನೋ ಫಾಲೋ ಮಾಡೋಣ ಅಂತ ಅವರ ಹಿಂದೆಯೇ ಹೊರಟ. ನಮ್ಮ ಅಡ್ಡಕ್ಕೆ ಬಂದದ್ದರಿಂದ ನಮಗೂ ಒಂದಿಷ್ಟು ಧೈರ್ಯ ಇತ್ತು.
ಹೆಚ್ಚಾಗಿ ಕುಡಿದಿದ್ದ ನಾನು ಆಕೆಯನ್ನು ರಸ್ತೆಯಲ್ಲಿ ಕೂಗಿ ಕರೆದೆ. ಒಂದೆರಡು ಕ್ಷಣ ಅಲ್ಲಿಯೇ ನಿಂತಿದ್ಲು. ಇದನ್ನೆಲ್ಲಾ ನೋಡಿ ಆಕೆಯೂ ಸಮ್ಮತಿಸ್ತಾಳೆ ಅಂತ ಆಕೆಯನ್ನು ಬಿಗಿಯಾಗಿ ಅಪ್ಪಿಕೊಂಡು ಮುತ್ತನ್ನು ಕೊಟ್ಟೆ. ಆಕೆ ಚೀರಿಕೊಂಡು ಕೈ ಕಚ್ಚಿದಾಗ ಲೆನೊ ಇತ್ತ ಎಳೆದುಕೊಂಡು ಬಾ ಅಂತಾ ಹೇಳಿದ. ಆಕೆಯನ್ನು ಎಳೆದುಕೊಂಡು ಹೋಗುವ ಯತ್ನ ಮಾಡಿದೆ. ಆದ್ರೆ ಸಾಧ್ಯವಾಗಲೇ ಇಲ್ಲ. ಆ ಹುಡುಗಿ ಮತ್ತೊಮ್ಮೆ ನನ್ನ ಕೈ ಕಚ್ಚಿದ್ದಕ್ಕೆ ರಸ್ತೆಯಲ್ಲಿ ಬಿಸಾಡಿ ಹೋದೆ. ಇದೆಲ್ಲಾ ಸಿಸಿ ಟಿವಿಯಲ್ಲಿ ಸೆರೆ ಆಗಿರೋದು ಗೊತ್ತೆ ಆಗಿರ್ಲಿಲ್ಲ. ಕೊನೆಗೆ ಟಿವಿಯಲ್ಲಿ ದೃಶ್ಯ ಬಂದಾಗ ನಮ್ಮನ್ನೂ ದೆಹಲಿಯ ನಿರ್ಭಯ ಕೇಸ್‍ನಂತೆಯೇ ಗಲ್ಲಿಗೇರಿಸ್ತಾರೋ ಅನ್ನೋ ಭಯದಿಂದ ಪರಾರಿಯಾಗಿದ್ವಿ.”
via public tv
No comments