Breaking News

ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲಿರುವ ಟ್ರಂಪ್

ಅಮೇರಿಕಾ  : ಮುಸ್ಲಿಂ ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೂಡಾನ್, ಯೆಮನ್, ಸಿರಿಯಾ ಮತ್ತು ಸೊಮಾಲಿಯಾದ ವಲಸೆಗಾರರ ನಿಷೇಧ ಆದೇಶ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭವಿಷ್ಯದಲ್ಲಿ ಪಾಕಿಸ್ತಾನವನ್ನೂ ಈ ಪಟ್ಟಿಯೊಳಗೆ ಸೇರಿಸಿಕೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂಉದ ಶ್ವೇತ ಭವನ ಹೇಳಿದೆ.

“ಈಗಾಗಲೇ ಏಳು ಮುಸ್ಲಿಂ ರಾಷ್ಟ್ರಗಳ ವಲಸಿಗರಿಗೆ ಅಮೆರಿಕದಲ್ಲಿ ನಿಷೇಧ ಹೇರಲಾಗಿದೆ. ಈ ಮುಸ್ಲಿಂ ರಾಷ್ಟ್ರಗಳಿಂದ ಅಮೆರಿಕ್ಕೆ ಭಯೋತ್ಪಾದನಾ ಭೀತಿ ಇದೆ. ಇವು ಅಪಾಯಕಾರಿ ರಾಷ್ಟ್ರಗಳಾಗಿವೆ” ಎಂದು ಶ್ವೇತ ಭವನದ ಸಿಬ್ಬಂದಿ ಮುಖ್ಯಸ್ಥ ರೀನ್ಸ್ ಪ್ರೀಬಸ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.


loading...

No comments