ಜೆಟ್ ಏರ್ವೇಸ್ ವಿಮಾನದ ಶೌಚದಲ್ಲಿ ಚಿನ್ನ ಪತ್ತೆ
ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆಟ್ ಏರ್ವೇಸ್ ವಿಮಾನದಲ್ಲಿನ ಶೌಚಾಲಯದೊಳಗೆ ಈ ಚಿನ್ನಾಭರಣಗಳನ್ನು ಅಡಗಿಸಿಡಲಾಗಿತ್ತು. ಸುಮಾರು 29 ಲಕ್ಷ ರೂ ಮೌಲ್ಯದ 1,233 ಗ್ರಾಂ ಚಿನ್ನಾಭರಣವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಈ ಆಭರಣಗಳು ಯಾರಿಗೆ ಸೇರಿದ್ದೆನ್ನುವುದು ದೃಢಪಟ್ಟಿಲ್ಲ. ಶೌಚಾಲಯದೊಳಗೆ ಇಷ್ಟೊಂದು ಚಿನ್ನಾಭರಣ ಬಿಟ್ಟು ಹೋಗಿರುವುದಾದರೂ ಏತಕ್ಕೆ ಎನ್ನುವ ಪ್ರಶ್ನೆ ಕಾಡಿದೆ.
ಕಪ್ಪು ಬಣ್ಣದ ಎರಡು ಪ್ಲಾಸ್ಟಿಕ್ ಕವರಿನಲ್ಲಿ ಚಿನ್ನಾಭರಣ ತುಂಬಿಸಿಡಲಾಗಿತ್ತು. ಇದರಲ್ಲಿ ನೆಕ್ಲೆಸ್, ಬ್ರಾಸ್ಲೆಟ್, ಸರ, ಕಿವಿಯೋಲೆ ಮಾದರಿಗಳ ರೂಪದ ಚಿನ್ನಾಭರಣ ಸೇರಿದೆ. ಅವುಗಳನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನೋಟುಗಳ ನಿಷೇಧದ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಕಸ್ಟಮ್ಸ್ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
loading...
No comments