Breaking News

ಗುಬ್ಬಿ ದಲಿತನನ್ನು ಬೆತ್ತಲುಗೊಳಿಸಿ ಥಳಿಸಿದ ದುಷ್ಕರ್ಮಿಗಳ ಬಂಧನ


ತುಮಕೂರು : ಯುವತಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ, ಚಪ್ಪಲಿ ಹಾರ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ್ದಕ್ಕೆ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಲಿತ ಯುವಕನನ್ನು ಹಿಂಸಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರತಿಭಟನೆಗಳೂ ಕೂಡ ಆರಂಭವಾಗಿತ್ತು. ಜಾಗೃತರಾದ ಆರೋಪಿಗಳು ಬೆಂಗಳೂರಲ್ಲಿ ತಲೆ ಮರೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಚುರುಕು ಕಾರ್ಯಾಚರಣೆಯನ್ನು ನಡೆಸಿದ ಪೊಲೀಸರು ತುಮಕೂರಿನ ರಿಂಗ್ ರೋಡ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ವಿಚಾರಣೆ ಮುಂದುವರೆದಿದೆ.

via-eesanje

No comments